ಸುಂಟಿಕೊಪ್ಪ: ನಾಡಿಗೆ ಬರುತ್ತಿರುವ ಕಾಡಾನೆಗಳು

Update: 2017-07-07 12:42 GMT

ಸುಂಟಿಕೊಪ್ಪ, ಜು.7: ಆಹಾರ ಅರಸಿ ಕಾಫಿತೋಟಕ್ಕೆ ಬರುತ್ತಿರುವ ಕಾಡಾನೆಗಳು ಹಿಂಡು ಕಾಜೂರು ಐಗೂರು,ಯಡವಾರೆ ಗ್ರಾಮದಲ್ಲಿ ಪ್ರತಿ ನಿತ್ಯ ಒಂದಿಲ್ಲೊಮದು ಜಾಗದಲ್ಲಿ ಕಾಣಿಸಿಕೊಳ್ಳುತ್ತಿದೆ .

ಇಂದು ಬೆಳಿಗ್ಗೆ 9 ಗಂಟೆಗೆ ರಾಜ್ಯಹೆದ್ದಾರಿ ಬಳಿಯಲ್ಲಿರುವ ಕಾಜೂರಿನ ಟಾಟಾ ಕಾಫಿತೊಟದಲ್ಲಿ 4 ಕಾಡಾನೆಗಳ ಹಿಂಡು ಪತ್ಯಕ್ಷವಾಯಿತು. 1 ಮರಿ ಕಾಡಾನೆಯು ತಾಯಿಯ ಆಶ್ರಯದಲ್ಲಿತ್ತು ಟಾಟಾ ಎಸ್ಟೇಟ್‍ನಿಂದ ರಸ್ತೆ ದಾಟಿ ಯವನಾಡು ಮೀಸಲು ಅರಣ್ಯ ಪ್ರದೇಶಕ್ಕೆ ದಾಟಲು ಈ ಕಾಡಾನೆಗಳು ಹೊಂಚು ಹಾಕುತ್ತಿದ್ದುದು ಕಂಡು ಬಂತು.

 ಗ್ರಾಮಸ್ಥರು ಕುತೂಲಹದಿಂದ ಈ ಕಾಡಾನೆಗಳನ್ನು ನೋಡಲು ಬೈಕ್, ಆಟೋ, ಕಾರುಗಳಲ್ಲಿ ಆಗಮಿಸುತ್ತಿದ್ದರು.

 ರಾತ್ರಿವೇಳೆ ಕಾಫಿ ತೋಟದಲ್ಲಿ ಸಿಗುವ ಹಲಸು,ಬಾಳೆ, ತೆಂಗು ಇತರೆ ಪದಾರ್ಥಗಳನ್ನು ತಿನ್ನಲು ಬರುತ್ತಿರುವ ಕಾಡಾನೆಗಲು ಹಗಲು ವಿಶ್ರಾಂತಿಗಾಗಿ ಕಾಡಿಗೆ ಹೋಗಲು ಪ್ರಯತ್ನಿಸುತ್ತಿರುವ ಚಿತ್ರಣ ಕಾಣಬಹುದಾಗಿದೆ.

 ಕಾಜೂರು, ಐಗೂರು, ಯಡವಾರೆ,ಯಡವನಾಡು, ವಿಭಾಗದಲ್ಲಿ 30 ವರ್ಷದ ಹಿಂದೆ ಅಪರೂಪವಾಗಿದ್ದ ಕಾಡಾನೆಗಳು ಈಗ ಪ್ರತಿನಿತ್ಯ ದರ್ಶನಭಾಗ್ಯ ನೀಡುತ್ತಿರುವ ಬಗ್ಗೆ ಜನರಲ್ಲಿ ಅತಂಕ ಮೂಡಿಸುತ್ತಿದೆ.

 ಮಾತಿನ ಚಕಮಕಿ: ಕಾಡಾನೆಗಳನ್ನು ಟಾಟಾ ಕಾಫಿ ತೋಟದಲ್ಲಿರುವುನ್ನು ವಿಕ್ಷೀಸಲು ಬಾಹನದಲ್ಲಿ ಬರುವ ಗ್ರಾಮಸ್ಥರನ್ನು ಟಾಟಾ ಎಸ್ಟೇಟ್ ಸಿಬ್ಬಂಧಿಗಲು ಅಧಿಕಾರಿಗಳ ವಿರುದ್ಧ ಪರಸ್ಪರ ಮಾತಿನ ಚಕಮಕಿ ನಡೆಯಿತು. ಕಾಡಾನೆಗಳು ಅರಣ್ಯಕ್ಕೆ ಹೋಗಲು ಹೆದರುತ್ತಿದೆ. ತೋಟದಲ್ಲಿ ಬೀಡುಬಿಟ್ಟರೆ ನಮ್ಮ ಕಾರ್ಮಿಕರಿಗೆ ಅಪಾಯ ಕಟ್ಟಿಟ್ಟಬುತ್ತಿ ನೀವು ಇಲ್ಲಿಂದ ವಾಪಾಸ್ಸು ತೆರಳಿ ಎಂದು ಟಾಟಾ ಎಸ್ಟೇಟ್ ಸಿಬ್ಬಂದಿಗಳು ಗ್ರಾಮಸ್ಥರಿಗೆ ಮನವಿ ಮಾಡಿದಾಗ ಮಾತಿನ ಚಕಮಕಿ ನಡೆಯಿತು.

ಶಾಲಾ ಮಕ್ಕಳು ವಾಹನ ಚಾಲಕರು ಭಯದಿಂದಲೇ ಈ ಪ್ರದೇಶದಲ್ಲಿ ಕಾಡಾನೆ ದಾಳಿಯ ಭೀತಿಯಿಂದ ಕಾಲ್ಕಿತ್ತರು.

 ಕಾಜೂರು ದುರ್ಗಾ ಪರಮೇಶ್ವರಿ ಎಸ್ಟೇಟ್ ಬಳಿ ಹಾಗೂ ಕಾಜೂರಿನಲ್ಲಿ ನಿರ್ಮಿಸಿದ ಕಾಡಾನೆ ಕಂದಕ ಕಾಮಗಾರಿ ಕಳಪೆಯಿಂದ ಕೂಡಿರುವುದರಿಂದ ಕಂದಕ ದಾಟಿಯೇ ಕಾಡಾನೆಗಳು ಸರಗವಾಗಿ ತೋಟಕ್ಕೆ ಗ್ರಾಮಕ್ಕೆ ಲಗ್ಗೆಯಿಡುತ್ತಿದೆ. ಐಗೂರಿನ ಎಂ.ಸಿ.ಸಂಜಯ್,ಗಣೇಶ್,ಅಡಂಗಾಲ ರಮೇಶ್ ಕೊಡಗು’ಸಿ’ರಾಜ್ಯವಾಗಿದ್ದಾಗ ಗೃಹಸಚಿವರಾದ ಮಲ್ಲಪ್ಪ ಅವರ ತೋಟಕ್ಕೆ ಆಗಾಗ್ಗೆ ನುಗ್ಗುತ್ತಿರುವ ಕಾಡಾನೆಗಳು ಬೆಳೆದ ಫಸಲುಗಳನ್ನು ನಾಶಪಡಿಸುತ್ತಿದೆ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ನಾಡಿಗೆ ಬರದಂತೆ ಸೂಕ್ತ ಕ್ರಮಕೈಗೊಳ್ಲಬೇಕೆಂದು ಮಚ್ಚಂಡ ಆಶೋಕ್ ಎಂ.ಸಿ. ಸಂಜಯ್ ಕೆ.ಯು.ಸೋಮಶೇಖರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News