ಪರಿಷ್ಕೃತ ಎಂಆರ್‌ಪಿ ದರದಲ್ಲಿ ಮಾರಾಟ ಮಾಡದಿದ್ದರೆ ಜೈಲು ಶಿಕ್ಷೆ: ಸರಕಾರದ ಎಚ್ಚರಿಕೆ

Update: 2017-07-07 15:03 GMT

ಹೊಸದಿಲ್ಲಿ, ಜು.7: ಜಿಎಸ್‌ಟಿ ಜಾರಿಗೊಂಡಿದ್ದು ಉತ್ಪಾದಕರು ಪರಿಷ್ಕೃತ ಎಂಆರ್‌ಪಿ(ಗರಿಷ್ಟ ಮಾರಾಟ ದರ) ದರದಲ್ಲಿ ವಸ್ತುಗಳನ್ನು ಮಾರಾಟ ಮಾಡಬೇಕು. ಇಲ್ಲದಿದ್ದರೆ ಶಿಕ್ಷೆ ವಿಧಿಸಲಾಗುವುದು ಎಂದು ಸರಕಾರ ಎಚ್ಚರಿಸಿದೆ.

  ಜಿಎಸ್‌ಟಿ ಯುಗದಲ್ಲಿ ಉತ್ಪಾದಕರು ಲಾಭವನ್ನು ವರ್ಗಾಯಿಸುವುದನ್ನು ಖಚಿತಪಡಿಸುವ ಉದ್ದೇಶದಿಂದ ಸರಕಾರ ಗ್ರಾಹಕ ರಕ್ಷಣೆ ಕಾನೂನಿಗೆ ಶುಕ್ರವಾರ ತಿದ್ದುಪಡಿ ತಂದಿದೆ. ಇದರಂತೆ ಉತ್ಪಾದಕರು ಸರಕುಗಳ ಮೇಲೆ ಪರಿಷ್ಕೃತ ದರವನ್ನು ಮುದ್ರಿಸಬೇಕು. ಇಲ್ಲದಿದ್ದರೆ ಜೈಲು ಶಿಕ್ಷೆ ಸೇರಿದಂತೆ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದೆ. ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ಬಂದ ಬಳಿಕ ಎಂಆರ್‌ಪಿ ಮೇಲೆ ಮನಬಂದಂತೆ ತೆರಿಗೆ ವಿಧಿಸಲಾಗುತ್ತಿದೆ ಎಂದು ಗ್ರಾಹಕರು ಸರಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News