ಅರ್ಜಿ ಆಹ್ವಾನ

Update: 2017-07-14 13:14 GMT

ಬೆಂಗಳೂರು, ಜು.14: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಂದ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನಿಂದ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಸಮಾಜ ಸೇವೆ, ಉದ್ಯಮ, ಕೈಗಾರಿಕೆ, ಸಂಶೋಧನೆ, ಆಡಳಿತ, ತಾಂತ್ರಿಕ, ಧಾರ್ಮಿಕ, ರಂಗಭೂಮಿ, ಚಲನಚಿತ್ರ, ಕಲೆ, ಸಾಹಿತ್ಯ, ನೃತ್ಯ, ಸಂಗೀತ, ಸಂಸ್ಕೃತಿ, ಕೃಷಿ, ಶಿಕ್ಷಣ, ಕಾನೂನು, ಪರಿಸರ, ಕ್ರೀಡೆ, ಜಾನಪದ, ಪತ್ರಿಕೋದ್ಯಮ, ರಾಜಕೀಯ, ಮಹಿಳಾ ಸಬಲೀಕರಣ, ಸಂಘಟನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ.

ಸತತವಾಗಿ ಎರಡು ದಶಕಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ 45 ವರ್ಷ ಮೇಲ್ಪಟ್ಟವರು ತಾವು ಮಾಡಿದ ಸಾಧನೆ ವಿವರಗಳ ದಾಖಲೆ, ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಜು.19 ರೊಳಗೆ ಅಧ್ಯಕ್ಷರು, ಕರ್ನಾಟಕ ಸಾಂಸ್ಕೃತಿಕ ಪರಿಷತ್ತು, ನಂ.46/2, 1 ನೆ ಮಹಡಿ, ಬೆಸ್ಕಾಂ ಕಚೇರಿ ಪಕ್ಕ, ಪುಟ್ಟಸ್ವಾಮಿ ಲೇಔಟ್, ಹೆಸರಘಟ್ಟ, ಬೆಂಗಳೂರು-560 088 ಇಲ್ಲಿಗೆ ಸಲ್ಲಿಸಬೇಕು. ಆಯ್ಕೆಯಾದವರಿಗೆ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ‘ಕರ್ನಾಟಕ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 99641 96958, 97210 25365 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News