ಕೋಮು ಪ್ರಚೋದಕ ಹೇಳಿಕೆ: ಕೇರಳದ ಮಾಜಿ ಡಿಜಿಪಿ ಸೇನ್‍ಕುಮಾರ್ ವಿರುದ್ಧ ಪ್ರಕರಣ ದಾಖಲು

Update: 2017-07-15 10:11 GMT

ತಿರುವನಂತಪುರಂ,ಜು.15: ಕೋಮು ಪ್ರಚೋದಕ ಹೇಳಿಕೆಗಳನ್ನು ನೀಡಿದ ದೂರಿನಲ್ಲಿ ಮಾಜಿ ಡಿಜಿಪಿ ಟಿ.ಪಿ.ಸೇನ್‍ಕುಮಾರ್ ಮತ್ತು ವಾರಪತ್ರಿಕೆಯೊಂದರ ಪ್ರಕಾಶಕರ ವಿರುದ್ಧ ಕ್ರೈಂಬ್ರಾಂಚ್ ಕೇಸು ದಾಖಲಿಸಿದೆ. ಸಮಕಾಲಿಕ ಮಲೆಯಾಳಂ ಎನ್ನುವ ವಾರಪತ್ರಿಕೆಯಲ್ಲಿ ನಂತರ ಇತರ ಮಾಧ್ಯಮಗಳಲ್ಲಿ ನೀಡಿದಹೇಳಿಕೆಗಳು ಗಂಭೀರವಾಗಿದೆ ಎಂದು ಡೈರೆಕ್ಟರ್ ಜನರಲ್ ಆಫ್ ಪ್ರಾಸಿಕ್ಯೂಶನ್ ಅಡ್ವೊಕೇಟ್ ಮಂಜೇರಿ ಶ್ರೀಧರನ್‍ನಾಯರ್ ಕ್ರೈಂಬ್ರಾಂಚ್ ಎಡಿಜಿಪಿ ನಿತಿನ್ ಅಗರ್‍ವಾಲ್‍ರಿಗೆ ಕಾನೂನು ಸಲಹೆ ನೀಡಿದ್ದಾರೆ.ಇದರ ಆಧಾರದಲ್ಲಿ ತಿರುವನಂತಪುರಂ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ಐಪಿಸಿ 153(ಎ) (1) (ಎ) ಖಲಂ ಪ್ರಕಾರ ಸೇನ್‍ಕುಮಾರ್‍ರನ್ನು ಪ್ರಥಮ ಆರೋಪಿಯನ್ನಾಗಿಯೂ , ಅವರ ಹೇಳಿಕೆಗಳನ್ನು ಪ್ರಕಟಿಸಿದ್ದಕ್ಕಾಗಿ ವಾರಪತ್ರಿಕೆಯ ಪ್ರಕಾಶಕರನ್ನು ಎರಡನೆ ಆರೋಪಿಯಾಗಿಯೂ ಕೇಸು ದಾಖಲಿಸಲಾಗಿದೆ. ಈ ಹಿಂದೆ ಡಿಜಿಪಿ ಲೋಕನಾರ್ಥ ಬೆಹ್ರಾರ ಪೊಲೀಸ್ ಕಚೇರಿಯಿಂದ ದೊರಕಿದ್ದ ಪ್ರಾಥಮಿಕ ಕಾನೂನು ಸಲಹೆಯ ಆಧಾರದಲ್ಲಿ ಸೇನ್‍ಕುಮಾರ್ ವಿರುದ್ಧ ಕ್ರೈಂಬ್ರಾಂಚ್ ತನಿಖೆ ಘೋಷಿಸಲಾಗಿತ್ತು. ಸ್ಪಷ್ಟವಾದ ಕಾನೂನು ಸಲಹೆಯ ನಂತರ ಎಫ್‍ಐಆರ್ ತಯಾರಿಸಿದರೆ  ಸಾಕೆಂದು ಮುಖ್ಯಮಂತ್ರಿ ಕಚೇರಿಯ ನಿರ್ದೇಶನ ನೀಡಿತ್ತು.ಆದರಂತೆ  ಕ್ರೈಂಬ್ರಾಂಚ್ ಎಜಿಡಿಪಿ ಜನರಲ್  ಆಫ್ ಪ್ರಾಸಿಕ್ಯೂಶನ್‍ರಿಂದ ಸಲಹೆಯನ್ನು ಪಡೆದು ಕೇಸು ದಾಖಲಿಸಿದ್ದಾರೆ. ತನ್ನ ಹೇಳಿಕೆಗಳನ್ನು ಪತ್ರಿಕೆ ತಿರುಚಿದೆ ಎಂದು ಸೇನ್‍ಕುಮಾರ್ ಡಿಜೆಪಿಗೆ ಪತ್ರ ನೀಡಿದ್ದಾರೆ.

ಪೊಲೀಸ್ ಮುಖ್ಯಸ್ಥನಾಗಿ ನಿವೃತ್ತರಾದ ಬಳಿಕ ಸೇನ್‍ಕುಮಾರ್ ವಾರಪತ್ರಿಕೆಗೆ ನೀಡಿದ್ದ ಸಂದರ್ಶನ ವಿವಾದವಾಗಿತ್ತು. ಸೇನ್‍ಕುಮಾರ್ ಹೇಳಿಕೆಗಳ ವಿರುದ್ಧ ಆರು ಮಂದಿ ಡಿಜಿಪಿಗೆ ದೂರು ನೀಡಿದ್ದರು. ವಿವಾದ ಸಂದರ್ಶನದ ಕುರಿತು ವಾರಪತ್ರಿಕೆಯ ಸಂಪಾದಕ ಸಿಜಿ ಜೇಮ್ಸ್ ಶುಕ್ರವಾರ ಡಿಜಿಪಿಗೆ  ಸ್ಪಷ್ಟೀಕರಣ ನೀಡಿದ್ದಾರೆ. ಸಂದರ್ಶನ ತಯಾರಿಸಿದ ವರದಿಗಾರನ ಸ್ಪಷ್ಟೀಕರಣವನ್ನು ಸಂಪಾದಕರು  ಡಿಜಿಪಿಗೆ ಒಪ್ಪಿಸಿದ್ದಾರೆ. ವರದಿಗಾರನೊಂದಿಗೆಸೇನ್‍ಕುಮಾರ್ ಹೇಳಿದ ಮಾತುಗಳು ಮಾತ್ರವೇ ಸಂದರ್ಶನದಲ್ಲಿದೆ. ಇದಕ್ಕೆ ಸಂಬಂಧಿಸಿದ ಫೋನ್ ರೆಕಾರ್ಡ್‍ಗಳನ್ನು ಪರಿಶೀಲಿಸಿ ನೋಡಬಹುದು ಎಂದು ಸಂಪಾದಕ ಸಿಜಿ ಜೇಮ್ಸ್ ಡಿಜಿಪಿಗೆ ವಿನಂತಿಸಿದ್ದಾರೆ. ಸಂದರ್ಶನದ ನಡುವೆ ತನಗೆ ಬಂದ ಫೋನ್ ಕಾಲ್‍ಗಳಲ್ಲಿ ಕೊಚ್ಚಿಯಲ್ಲಿ ಕಿರುಕುಳ ನೀಡಲಾಗಿದ್ದ ನಟಿಯ ವಿರುದ್ಧ ಸೇನ್‍ಕುಮಾರ್ ಕೆಟ್ಟದಾಗಿ  ಮಾತಾಡಿದ್ದಾರೆ. ಆದರೆ ಅದು  ತಮ್ಮ ವರದಿಗಾರನನೊಂದಿಗೆ ಹೇಳದ ವಿಷಯವಾದ್ದರಿಂದ ಅದನ್ನುವಾರಪತ್ರಿಕೆಯಲ್ಲಿ ಪ್ರಕಟಿಸಿಲ್ಲ ಎಂದು ಸಿಜಿ ಜೇಮ್ಸ್ ಡಿಜಿಪಿಗೆಸಲ್ಲಿಸಿದ ಸ್ಪಷ್ಟೀಕರಣ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News