ನಾರಾಯಣಗುರು ಅಧ್ಯಯನ ಕೇಂದ್ರಕ್ಕೆ ಸಂಶೋಧನಾ ಸಹಾಯಕರ ಹುದ್ದೆಗೆ ಅರ್ಜಿ ಅಹ್ವಾನ

Update: 2017-07-15 16:31 GMT

ಉಡುಪಿ, ಜು.15: ಮಂಗಳೂರು ವಿವಿಯ ‘ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಕೇಂದ್ರ’ದಲ್ಲಿ ಸಂಶೋಧನಾ ಸಹಾಯಕರಾಗಿ ಕಾರ್ಯ ನಿರ್ವಹಿಸಲು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕಾಲಬದ್ಧ ಅಧ್ಯಯನ ಮತ್ತು ಸಂಶೋಧನಾ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುವುದು, ಪ್ರಕಟಣೆ, ಪ್ರಸರಣ ಮುಂತಾದ ಸಂಪಾದನೆ ಹಾಗೂ ಸಂಘಟನಾತ್ಮಕ ಕೆಲಸಗಳನ್ನು ನಿರ್ವಹಿಸುವುದು ಸಂಶೋಧನಾ ಸಹಾಯಕ ಹುದ್ದೆಯ ಪ್ರಮುಖ ಕರ್ತವ್ಯವಾಗಿದೆ. ಮಾಸಿಕ 14,000ರೂ. ಸಂಭಾವನೆ ಯನ್ನು ನೀಡಲಾಗುತ್ತದೆ.

ನಾರಾಯಣಗುರುಗಳ ಜೀವನ, ಸಾಧನೆಗಳ ಕುರಿತು ಪ್ರಕಟಣೆ, ಸಂಶೋಧನೆ ಅನುಭವವಿರುವವರು ತಮ್ಮ ವಿದ್ಯಾರ್ಹತೆ, ಜನ್ಮದಿನಾಂಕ, ಶ್ರೇಣಿ/ವರ್ಗ, ಅನುಭವ, ಸಂಪೂರ್ಣ ಅಂಚೆ ವಿಳಾಸ, ಇ-ಮೇಲ್, ದೂರವಾಣಿ ಹಾಗೂ ಸಂಶೋಧನಾ ಅನುಭವಗಳ ವಿವರಗಳೊಂದಿಗೆ ದಾಖಲೆಗಳ ಪ್ರತಿಯೊಂದಿಗೆ ಜು.22ರೊಳಗೆ ಕುಲಸಚಿವರ ಕಚೇರಿ, ಅಭಿವೃದ್ಧಿ ವಿಭಾಗ, ಮಂಗಳೂರು ವಿವಿ ಇಲ್ಲಿಗೆ ಸಲ್ಲಿಸಬೇಕು.
ಇನ್ನೂ ಹೆಚ್ಚಿನ ವಿವರಗಳನ್ನು ವಿವಿಯ ವೆಬ್‌ಸೈಟ್‌ನಿಂದಲೂ- www.mangaloreuniversity.ac.in - ಪಡೆಯಬಹುದು ಎಂದು ವಿವಿ ಕುಲಸಚಿವರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News