ಗೋರಕ್ಷಣೆಯ ಹೆಸರಲ್ಲಿ ಹಿಂಸಾಚಾರ ನಡೆಸುವವರಿಗೆ ರಕ್ಷಣೆ ನೀಡದಂತೆ ಕೇಂದ್ರ ,ರಾಜ್ಯಕ್ಕೆ ಸುಪ್ರೀಂ ಸೂಚನೆ

Update: 2017-07-21 09:45 GMT

ಹೊಸದಿಲ್ಲಿ, ಜು.21: ಗೋರಕ್ಷಣೆಯ ಹೆಸರಿನಲ್ಲಿ  ಹಿಂಸಾಚಾರ ನಡೆಸುವವರಿಗೆ ರಕ್ಷಣೆ ನೀಡದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಇಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. 

ನ್ಯಾ.ದೀಪಕ್ ಮಿಶ್ರ, ನ್ಯಾ.ಎಎಂ ಖಾನ್ವಿಲ್ಕರ್, ನ್ಯಾ.ಎಂಎಂ ಶಾಂತನಗೌಡರ್ ನೇತೃತ್ವದ  ಸುಪ್ರೀಂ ಕೋರ್ಟ್ ನ ನ್ಯಾಯಪೀಠ  ಸೂಚನೆ ನೀಡಿದೆ.

ಕಾನೂನು ಸುವ್ಯವಸ್ಥೆ ರಾಜ್ಯ ಸರಕಾರದ  ವ್ಯಾಪ್ತಿಗೆ ಸೇರಿದ್ದು, ಕೇಂದ್ರ ಸರಕಾರದ  ಪಾತ್ರವಿಲ್ಲ. ಆದರೂ ಕೇಂದ್ರ ಸರಕಾರ  ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ಪ್ರಕರಣಗಳನ್ನು ಉತ್ತೇಜಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ  ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಹೇಳಿಕೆ ನೀಡಿದ್ದಾರೆ.

 ಗೋರಕ್ಷಣೆಯ ಹೆಸರಿನಲ್ಲಿ ದೇಶದ  ಎಲ್ಲೂ  ಹಿಂಸಾಚಾರಕ್ಕೆ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News