ಫೇಸ್‌ಬುಕ್ ಸ್ನೇಹಿತೆಗಾಗಿ ತಂದೆಯ ಖಾತೆಗೇ ಕನ್ನ!

Update: 2017-07-25 04:08 GMT

ವಿಶಾಖಪಟ್ಟಣ, ಜು. 25: ತಂದೆಯ ನಿವೃತ್ತಿಯ ವೇಳೆ ಬಂದ 14 ಲಕ್ಷ ರೂಪಾಯಿಗಳನ್ನು ಆನ್‌ಲೈನ್‌ನಲ್ಲಿ ಫೇಸ್‌ಬುಕ್ ಗರ್ಲ್‌ಫ್ರೆಂಡ್‌ಗೆ ವರ್ಗಾಯಿಸಿರುವ 17ರ ಬಾಲಕನಿಗೆ ತಾನು ವಂಚನೆಗೆ ಒಳಗಾಗಿರುವುದು ತಿಳಿದುಬಂದಿದ್ದು, ಇದೀಗ ಸೈಬರ್ ಪೊಲೀಸರ ಮೊರೆ ಹೋಗಿದ್ದಾನೆ.

ರೈಲ್ವೆಯ ನಿವೃತ್ತ ಉದ್ಯೋಗಿಯೊಬ್ಬರ ಪುತ್ರನಾದ ಈತ, ಫೇಸ್‌ಬುಕ್ ಸ್ನೇಹಿತೆ ಜತೆ ಹಲವು ತಿಂಗಳಿಂದ ಚಾಟ್ ಮಾಡುತ್ತಿದ್ದ. ಕೆಲ ವಾರಗಳ ಬಳಿಕ ಯುವತಿ ಹಣದ ತುರ್ತು ಇದೆ ಎಂಬ ಕಥೆ ಕಟ್ಟಿದ್ದಾಳೆ. ತಂದೆಯ ಬ್ಯಾಂಕ್ ಖಾತೆಯ ಗೌಪ್ಯ ವಿವರಗಳನ್ನು ತಿಳಿದುಕೊಂಡಿದ್ದ ಬಾಲಕ ಇದನ್ನು ನಂಬಿ, 14 ಲಕ್ಷ ರೂ. ಆಕೆಗೆ ವರ್ಗಾಯಿಸಿದ್ದಾನೆ. 34 ಬಾರಿ ಆಕೆಯ ಖಾತೆಗೆ 20 ಸಾವಿರದಿಂದ 40 ಸಾವಿರ ರೂ. ನಂತೆ ವರ್ಗಾಯಿಸಿದ್ದಾನೆ.

ಪ್ರತಿ ರವಿವಾರ 10.40 ರಿಂದ 12 ಗಂಟೆಯ ನಡುವೆ ಈ ಹಣ ವರ್ಗಾವಣೆಯಾಗಿದೆ. ಯುವಕನ ತಂದೆ ತಮ್ಮ ನಿವೃತ್ತಿ ವೇಳೆ ಬಂದ 14 ಲಕ್ಷ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರು. ಬಾಲಕ ವರ್ಗಾಯಿಸಿರುವ ಹಣ ಕೊಲ್ಕತ್ತಾ ಮೂಲದ ವ್ಯಕ್ತಿಯ ಖಾತೆಗೆ ಜಮೆ ಆಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News