4,000 ರೂ.ಗಾಗಿ ಮುಸ್ಲಿಂ ಯುವಕನನ್ನು ಅಪಹರಿಸಿ ಕೊಲೆಗೈದ ದುಷ್ಕರ್ಮಿಗಳು

Update: 2017-07-27 09:51 GMT

ಲುಧಿಯಾನ,ಜು.27: ಸಾಲದ ಹಣಕ್ಕಾಗಿ ಯುವಕನನ್ನು ಅಪಹರಿಸಿದ ತಂಡವೊಂದು ಆತನ್ನು ಕೊಲೆಗೈದ ಘಟನೆ ಜೋಧೆವಾಲದಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಸಮುದಾಯದ ನೂರಾರು ಜನರು ಮೃತದೇಹವನ್ನು ಜಲಂಧರ್ ಹೆದ್ದಾರಿಯಲ್ಲಿಟ್ಟು ರಸ್ತೆ ತಡೆದಿದ್ದಾರೆ. ಇದರಿಂದ ಸುಮಾರು ಎರಡು ಗಂಟೆಯವರೆಗೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಕೊಲೆಯಾದ ವ್ಯಕ್ತಿ ಮುಹಮ್ಮದ್ ಇರ್ಷಾದ್(32) ಪಂಡಿತ್ ಮದನ್‍ಮೋಹನ್‍ ಎಂಬಾತನಿಂದ ಹತ್ತುಸಾವಿರ ರೂಪಾಯಿ ಸಾಲ ಪಡೆದಿದ್ದ. ಇದರಲ್ಲಿ ಇರ್ಷಾದ್ ಆರುಸಾವಿರ ರೂಪಾಯಿ ಸಂದಾಯ ಮಾಡಿದ್ದಾನೆ. ಉಳಿದ ನಾಲ್ಕು ಸಾವಿರ ರೂಪಾಯಿ ಕೊಡಲು ಆತನಿಗೆ ಆಗಿರಲಿಲ್ಲ. ಇದಕ್ಕಾಗಿ ಬುಧವಾರ ಮಧ್ಯಾಹ್ನ ಪಂಡಿತ್ ಮದನ್‍ಮೋಹನ್ ನ ಜನರು ಇರ್ಷಾದ್‍ನನ್ನು ಅಪಹರಿಸಿ ಹೊಡೆದು ಕೊಂದು ಹಾಕಿದ್ದಾರೆ.

ಪೊಲೀಸರು ಪಂಡಿತ್ ಮದನ್‍ಮೋಹನ್‍ನ ಕೆಲಸದಾಳುವನ್ನು ಬಂಧಿಸಿದ್ದಾರೆ. ಪಂಡಿತ್ ಮತ್ತು ಆತನ ಪುತ್ರ ಪರಾರಿಯಾಗಿದ್ದಾರೆ. ಜೊಧೇವಾಲದ ಪೊಲೀಸ್ ಇನ್ಸ್ ಪೆಕ್ಟರ್ ಘಟನೆಯ ಮಾಹಿತಿ ತಿಳಿದೊಡನೆ ಸ್ವಯಂ ಸ್ಥಳಕ್ಕೆ ಹೋಗಿದ್ದೇನೆ ಎಂದು ತಿಳಿಸಿದ್ದಾರೆ. ಆರೋಪಿಗಳ ಮನೆಗೆ ಪೊಲೀಸರು ದಾಳಿ ಮಾಡಿದಾಗ ಅವರು ಪರಾರಿಯಾಗಿದ್ದರು. ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News