ನವಾಝ್ ಶರೀಫ್ ರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿದ ಪಾಕ್ ಸುಪ್ರೀಂ ಕೋರ್ಟ್

Update: 2017-07-28 08:37 GMT

ಇಸ್ಲಾಮಾಬಾದ್, ಜು.28: ಭ್ರಷ್ಟಾಚಾರ ಹಾಗೂ ಅಕ್ರಮ ಸಂಪತ್ತು ಗಳಿಕೆ ವಿಚಾರದಲ್ಲಿ ಮಹತ್ವದ ತೀರ್ಪು ನೀಡಿರುವ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನವಾಝ್ ಶರೀಫ್ ರನ್ನು ದೋಷಿ ಎಂದು ಪರಿಗಣಿಸಿದ್ದು, ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿ ತೀರ್ಪಿತ್ತಿದೆ.

ನ್ಯಾಯಾಲಯದ ಐವರು ಸದಸ್ಯರ ಪೀಠವು ಸರ್ವಾನುಮತದಿಂದ ಈ ತೀರ್ಪು ನೀಡಿದೆ. ಲಂಡನ್ ನಲ್ಲಿ ಸೊತ್ತುಗಳ ಖರೀದಿಗೆ ಭಾರೀ ಭ್ರಷ್ಟಾಚಾರ ನಡೆಸಿದ್ದರು ಎನ್ನುವ ಆರೋಪ ಶರೀಫ್ ಮೇಲಿತ್ತು.

"ಸಂಸತ್ತಿನ ಪ್ರಾಮಾಣಿಕ ಸದಸ್ಯನಾಗಿ ಇನ್ನು ಅವರು ಮುಂದುವರಿಯಲು ಸಾಧ್ಯವಿಲ್ಲ. ಪ್ರಧಾನಿ ಹುದ್ದೆಯನ್ನು ಅವರು ತೊರೆಯಬೇಕಾಗಿದೆ" ಎಂದು ನ್ಯಾಯಾಧೀಶ ಇಜಾಝ್ ಅಫ್ಝಲ್ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News