ಮುಸ್ಲಿಮ್, ಕ್ರೈಸ್ತ, ಯಹೂದಿ ನಾಯಕರಿಗೆ ನಿರ್ಬಂಧ ಹೇರಿದ ಇಸ್ರೇಲ್

Update: 2017-07-28 09:52 GMT

ಜೆರುಸಲೇಂ,ಜು. 28: ತಮ್ಮ ವಿರುದ್ಧ ಬಹಿಷ್ಕಾರವನ್ನು ಬೆಂಬಲಿಸುವ ಐವರು ಮುಸ್ಲಿಂ, ಕ್ರೈಸ್ತ, ಯಹೂದಿ ಧಾರ್ಮಿಕ ನಾಯಕರಿಗೆ ದೇಶ ಪ್ರವೇಶಿಸದಂತೆ ಇಸ್ರೇಲ್ ನಿರ್ಬಂಧ ಹೇರಿದೆ. ಜುಯಿಷ್ ಫಾರ್ ಪೀಸ್, ಅಮೆರಿಕನ್ ಮುಸ್ಲಿಮ್ಸ್ ಫಾರ್ ಫೆಲೆಸ್ತೀನ್, ಪೆಸ್‍ಬಿಟೇರಿಯನ್ ಪೀಸ್ ಫೆಲೋಶಿಪ್ ಎಂಬ ಸಂಘಟನೆಯ ನಾಯಕರನ್ನು ದೇಶಪ್ರವೇಶಿಸದಂತೆ ಇಸ್ರೇಲ್ ನಿಷೇಧಿಸಿದೆ.

ಬಹಿಷ್ಕಾರಕ್ಕಾಗಿ ರೂಪುಗೊಂಡಿರುವ ಬಿಡಿಎಸ್ ಮೂವ್‍ಮೆಂಟಿನ ಜೊತೆ ಸೇರಿ ಇವರು ಬಹುಕಾಲದಿಂದ ಕಾರ್ಯಾಚರಿಸುತ್ತಿದ್ದಾರೆ ಎಂದು ಇಸ್ರೇಲ್ ಗೃಹಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮ್ಮ ವಿರುದ್ಧ ಬಹಿಷ್ಕಾರದ ಭಾಗವಾಗುವ ವಿದೇಶಿ ಪ್ರಜೆಗಳನ್ನು ತಡೆಯುವ ನೀತಿಯನ್ನುಕಳೆದ ಮಾರ್ಚ್‍ನಲ್ಲಿ ಇಸ್ರೇಲ್ ರೂಪಿಸಿದೆ. ತದನಂತರ ಈ ಐದು ಮಂದಿಗೆ ಇದೇ ಮೊದಲಬಾರಿ ಇಸ್ರೇಲ್ ನಿರ್ಬಂಧ ವಿಧಿಸಿದೆ.

 ಬಿಡಿಎಸ್ ಮೂವ್‍ಮೆಂಟ್ ಫೆಲೆಸ್ತೀನಿನ ಸ್ವಾತಂತ್ರ್ಯಕ್ಕಾಗಿ ಇಸ್ರೇಲ್ ಉತ್ಪನ್ನಗಳ ಬಹಿಷ್ಕಾರ ಮುಂತಾದ ಅಹಿಂಸಾತ್ಮಕ ಮಾರ್ಗದಲ್ಲಿ ಕಾರ್ಯಾಚರಿಸುತ್ತಿದೆ. ಇದರಲ್ಲಿಜಗತ್ತಿನ ವಿವಿಧ ಕಡೆಯ ಕ್ಯಾಂಪಸ್ ಕಾರ್ಯಕರ್ತರ ಸಹಿತ ವಿವಿಧ ಧಾರ್ಮಿಕ ವ್ಯಕ್ತಿಗಳ ಸಾವಿರಾರು ಸ್ವಯಂಸೇವಕರಿದ್ದಾರೆ. ಬಿಡಿಎಸ್ ವೆಸ್ಟ್‍ಬ್ಯಾಂಕ್‍ನ ಮಾನವಹಕ್ಕುಗಳ ಸಂಘಟನೆಯನ್ನು ಭೇಟಿಯಾಗುವ ಯೋಜನೆ ಹಾಕಿತ್ತು. ಇದಕ್ಕಾಗಿ ತನ್ನ ಸಹಿತ ಐವರು ನಾಯಕರ ಪ್ರಯಾಣವನ್ನು ಇಸ್ರೇಲ್ ನಿಷೇಧಿಸಿದೆ ಎಂದು ಜುಯಿಷ್ ವೇಯಿಸ್ ಫಾರ್ ಪೀಸ್‍ನ ಡೆಪ್ಯುಟಿ ಡೈರೆಕ್ಟರ್ ಯಹೂದಿ ಧರ್ಮ ಗುರು ಅಲಸ್ ವೈಸ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News