×
Ad

ಅಮೆರಿಕದಲ್ಲಿ ಶೂಟೌಟ್ | 4 ಪೊಲೀಸ್ ಅಧಿಕಾರಿಗಳ ಸಾವು

Update: 2024-04-30 21:46 IST

ನ್ಯೂಯಾರ್ಕ್: ಅಪರಾಧಿಯೊಬ್ಬನಿಗೆ ವಾರಂಟ್ ನೀಡಲು ಆತನ ಮನೆಗೆ ತೆರಳಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 4 ಅಧಿಕಾರಿಗಳು ಸಾವನ್ನಪ್ಪಿದ್ದು ಇತರ 4 ಅಧಿಕಾರಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಪ್ರಕರಣದ ಅಪರಾಧಿಗೆ ವಾರಂಟ್ ನೀಡಲು ಆತನ ಮನೆಗೆ ಪೊಲೀಸರ ತಂಡ ತೆರಳಿತ್ತು. ಆಗ ಮನೆಯ ಎದುರಿನ ವರಾಂಡದಲ್ಲಿದ್ದ ಅಪರಾಧಿ ಪೊಲೀಸರತ್ತ ಗುಂಡಿನ ದಾಳಿ ಆರಂಭಿಸಿದ್ದಾನೆ.

ಪೊಲೀಸರ ಪ್ರತಿದಾಳಿಯಲ್ಲಿ ಆತ ಹತನಾಗಿದ್ದಾನೆ. ಆಗ ಮನೆಯೊಳಗಿದ್ದ ಮತ್ತೊಬ್ಬ ವ್ಯಕ್ತಿ ನಡೆಸಿದ ಗುಂಡಿನ ದಾಳಿಯಲ್ಲಿ 4 ಅಧಿಕಾರಿಗಳು ಮೃತಪಟ್ಟಿದ್ದು ಇತರ ನಾಲ್ವರು ಗಾಯಗೊಂಡಿದ್ದಾರೆ. 3 ಗಂಟೆ ನಡೆದ ಗುಂಡಿನ ಚಕಮಕಿ ಬಳಿಕ ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದ ಪೊಲೀಸರು ಗುಂಡು ಹಾರಿಸಿದ ಆರೋಪಿಯನ್ನು ಬಂಧಿಸಿದ್ದಾರೆ. ಮನೆಯಲ್ಲಿ ಮಹಿಳೆ ಹಾಗೂ 17 ವರ್ಷದ ಯುವಕನೊಬ್ಬನೂ ಇದ್ದು ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿರುವುದಾಗಿ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News