ಕಲಾಭವನದಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

Update: 2017-07-28 10:56 GMT

ಹಾಸನ, ಜು.28: ವೀಕ್ಷಣೆ ಮಾಡುವವರು ಯಾರು ಇಲ್ಲದಿದ್ದರೇ ಚಿತ್ರಕಲೆಗೆ ಅಸ್ಥಿತ್ವವೇ ಇರುತ್ತಿರಲಿಲ್ಲ ಎಂದು ಖ್ಯಾತ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ತಿಳಿಸಿರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಗುರುರಾಜು ವಿದ್ಯಾಸಂಸ್ಥೆ, ಶಾಂತಕಲಾ ಚಿತ್ರಕಲಾ ವಿದ್ಯಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಲಾ ಹಮ್ಮಿಕೊಳ್ಳಲಾಗಿರುವ ಚಿತ್ರಕಲಾ ಪ್ರದರ್ಶನ-2017ನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನೋಡುವವರು ಯಾರು ಇಲ್ಲದಿದ್ದರೇ ಚಿತ್ರಕಲೆಗೆ ಯಾವ ಅಸ್ಥಿತ್ವವೇ ಬರುತ್ತಿರಲಿಲ್ಲ. ಚಿತ್ರಕಲೆಯ ಬಗ್ಗೆ ಯಾವ ಕಲಾವಿದನು ವಿವರಣೆ ಕೊಡುವುದಿಲ್ಲ. ಅದನ್ನು ವೀಕ್ಷಣೆ ಮಾಡಿದವರೇ ಅರ್ಥ ಮಾಡಿಕೊಂಡು ಗ್ರಹಿಸಬೇಕು ಎಂದು ಕಿವಿಮಾತು ಹೇಳಿದರು.

ಅವರವರ ಕಲ್ಪನೆಗೆ ತಕ್ಕ ಹಾಗೇ ತಿಳಿಸುತ್ತದೆ. ಒಂದು ಬೃಹತಕಾರದ ಚಿತ್ರ ಆಗಬೇಕಾದರೇ ಅದರೊಳಗೆ ಹಲವು ವಿಷಯಗಳನ್ನು ತಿಳಿಸಿರಬೇಕಾಗಿರುತ್ತದೆ. ಒಂದು ಚಿತ್ರ ಮೂಡಿಬರಬೇಕಾದರೇ ಕಲಾವಿದನ ತಲೆಯಲ್ಲಿ ಕಲ್ಪನೆ ಇರಬೇಕು ಎಂದರು. ಚಿತ್ರ ಎಂಬುದು ಕಣ್ಣಿಗೆ ಬೀಳುತ್ತದೆ. ನೋಟವು ತನ್ನನು ತಾನು ಎಂದು ನೋಡಿಕೊಳ್ಳದು, ಇನ್ನೆನನ್ನೂ ನೋಡಿತು, ಮತ್ತೇನನ್ನು ನೋಡಬಹುದು, ಕಣ್ಣಿನ ನೋಟ, ಕಣ್ಣಿನ ಮಾಟ ಎಂದು ಕವನ ಹೇಳಿದರು. ಕಣ್ಣಿನಿಂದ ಪ್ರಪಂಚವನ್ನು ಬೇರೆ ರೀತಿ ನೋಡುತ್ತಾರೆ. ಆಗೇ ಚಿತ್ರವನ್ನು ಕೂಡ ಅವರದೆ ನೋಟದಲ್ಲಿ ಬರೆಯುತ್ತಾರೆ. ಶಿಕ್ಷಣ ಎಂಬುದು ಜ್ಞಾನವನ್ನು ವೃದ್ಧಿಸುತ್ತದೆ. ಕನ್ನಡ ಭಾಷೆಯ ಜೊತೆಗೆ ನ್ಯಾಷನಲ್ ಭಾಷೆಯನ್ನು ಕಲಿತರೇ ಇನ್ನು ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
     
ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ವಾಣಿವಿಲಾಸ ಶಾಲೆಯ ಪ್ರಾಂಶುಪಾಲ ಟಿ. ನಾಗರಾಜು ಮಾತನಾಡಿ, ಒಂದು ಚಿತ್ರ ಬಿಡಿಸುವುದು ಸುಲಭದ ಮಾತಲ್ಲ. ಅವರ ತಲೆಯಲ್ಲಿ ಒಂದು ಸಮಾಜಮುಖಿ ಯೋಚನೆ ಇಟ್ಟುಕೊಂಡು ಅದನ್ನೆಲ್ಲಾ ಚಿತ್ರ ಬಿಡಿಸಿ ಇತರರಿಗೆ ಪ್ರದರ್ಶಿಸುವ ಕೆಲಸ ಮಾಡುತ್ತಾರೆ ಎಂದರು.  ಕಾರ್ಯಕ್ರಮದಲ್ಲಿ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ವಸಂತಕುಮಾರ್, ಎಲ್.ಜಿ. ಲತಾ ಹಾಗೂ ಡಿ.ಟಿ. ವೆಂಕಟೇಶ್ ಕಾರ್ನಡ್ ಮೂವರು ತಮ್ಮ ಕೈಯಾರೆ ಬಿಡಿಸಿದ ಚಿತ್ರವನ್ನು ಪ್ರದರ್ಶಿಸಲಾಯಿತು.
   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News