ಮಳೆ ನೀರು ಸಂಗ್ರಹ ಜಾಗೃತಿ ಅಂದೋಲನಕ್ಕೆ ಚಾಲನೆ

Update: 2017-07-28 11:00 GMT

ಹಾಸನ, ಜು.28: ಜಿಲ್ಲೆ ವ್ಯಾಪ್ತಿಯ ಎಲ್ಲಾ ಸರಕಾರಿ ಹಾಗೂ ಖಾಸಗಿ ಬೃಹತ್ ಕಟ್ಟಡಗಳ ಮೇಲೆ ತಕ್ಷಣವೇ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಲು ಆದೇಶ ನೀಡಬೇಕೆಂದು ಆಗ್ರಹಿಸಿ ಹಸಿರುಭೂಮಿ ಪ್ರತಿಷ್ಠಾನದಿಂದ ಬೃಹತ್ ಜಾಗೃತಿ ಆಂದೋಲನವನ್ನು ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆಯಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ಸರಕಾರಿ ಕಛೇರಿ ಹಾಗೂ ಖಾಸಗಿ ಕಛೇರಿಗಳಿಗೆ ತೆರಳಿ ಮಳೆ ನೀರನ್ನು ಸಂಗ್ರಹಿಸುವ ಬಗ್ಗೆ ಅರಿವು ಮೂಡಿಸಿದರು. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಬರ ಆವರಿಸಿದ್ದು, ನೀರಿನ ತೀವ್ರ ಕೊರತೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗುವುದರಿಂದ ನೀರಿನ ಲಭ್ಯತೆ ಮಾಡಲು ಮಳೆ ನೀರಿನ ಸಮರ್ಪಕ ಸಂಗ್ರಹಣೆ ಮೂಲಕ ಬಳಕೆ ಮಾಡುವುದರ ಮೂಲಕ ಮುಂದೆ ಸಂಭವಿಸುವ ನೀರಿನ ಕೊರತೆ ಬಾರದಂತೆ ತಡೆಯಬಹುದು ಎಂದರು.

ಮಳೆ ನೀರಿನ ಪದ್ಧತಿಯನ್ನು ಮೊದಲಿಗೆ ಜಿಲ್ಲೆಯ ಎಲ್ಲಾ ಸರಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸುವ ಮೂಲಕ ಇತರರಿಗೆ ಮಾರ್ಗದರ್ಶಕರಾಗಬೇಕು. ಎಲ್ಲಾ ಸಾರ್ವಜನಿಕ ಕಟ್ಟಡಗಳ ಮೇಲೆ ಅಳವಡಿಸಲಿ ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಜಿಲ್ಲಾಡಳಿತ ನೆರವಿನೊಂದಿಗೆ ಹಸಿರುಭೂಮಿ ಪ್ರತಿಷ್ಠಾನ ಜಲಾಂದೋಲನ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಕೆರೆ, ಕಟ್ಟೆ, ಕಲ್ಯಾಣಿಗಳಲ್ಲಿ ಹೊಳು ಎತ್ತುವ ಮತ್ತು ಪುನಶ್ಚೇತನ, ನೀರಿನ ಮಿತವ್ಯಯ, ಮಳೆ ನೀರಿನ ಸಮರ್ಪಕ ಸಂಗ್ರಹಣೆ ಕುರಿತು ಜಾಗೃತಿ ಹಾಗೂ ಸರಕಾರಿ ಖಾಲಿ ಜಾಗಗಳಲ್ಲಿ ವ್ಯಾಪಕವಾಗಿ ಸಸಿ ನೆಡುವ ರಚನಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದಾಗಿ ಹೇಳಿದರು.

ಈ ಬಾರಿ ಭೂಮಿಗೆ ಬರಬಹುದಾದ ಮಳೆ ನೀರು ಹರಿದು ಹೋಗದೇ ಸಂಗ್ರಹಿಸಿ ಇಡಲು ಸುಲಭ, ಸರಳ ಪರಿಹಾರವನ್ನು ಕಡಿಮೆ ಖರ್ಚಿನಲ್ಲಿ ಎಲ್ಲರು ಮಾಡಬಹುದಾದ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಯಾವಗ ಮಳೆ ಬಿದ್ದರೂ ದೊಡ್ಡ ಕಟ್ಟಡಗಳ ಮೇಲ್ಚಾವಣಿಗಳಿಂದ ಸಂಗ್ರಹಿಸುವಂತೆ ಜಿಲ್ಲೆಯ ಎಲ್ಲಾ ಸರಕಾರಿ ಕಛೇರಿ, ಖಾಸಗಿ ಸಂಸ್ಥೆ, ಶಾಲಾ-ಕಾಲೇಜುಗಳಿಗೆ ಆದೇಶ ಮಾಡಬೇಕು. ಯಾವುದೇ ಹೊಸ ಕಟ್ಟಡ ನಿರ್ಮಾಣಗಳಿಗೆ ಅನುಮತಿ ನೀಡುವ ಮೊದಲು ಕಡ್ಡಾಯವಾಗಿ ಮಳೆ ನೀರು ಕೊಯ್ಲು ಅಳವಡಿಸಲು ಸೂಚನೆ ಕೊಡುವಂತೆ ನಗರಸಭೆ, ಪುರಸಭೆಗಳಿಗೆ ಆದೇಶಿಸಬೇಕು ಎಂದು ಹೇಳಿದರು.

ಹಸಿರುಭೂಮಿ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಕ್ಕೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಳೆ ನೀರು ಉಳಿಸಿ ಎಂಬ ಘೋಷಣೆ ಕೇಳಿ ಬಂದಿತು.

ಇದೆ ವೇಳೆ ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ. ವೆಂಕಟೇಶ್ ಮೂರ್ತಿ, ಕಾರ್ಯದರ್ಶಿ ಎಸ್.ಎಸ್. ಪಾಷ, ಖಜಾಂಚಿ ಟಿ.ಎಂ. ಶಿವಶಂಕರಪ್ಪ, ಸಂಘಟನಾ ಕಾರ್ಯದರ್ಶಿ ರೂಪ ಹಾಸನ್, ಮಲೆನಾಡು ನರ್ಸಿಂಗ್ ಹೋಮ್ ವೈದ್ಯರು ಸಾವಿತ್ರಿ, ಚಲಂ, ಮಂಜುನಾಥ್ ಮೊರೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News