ಶಾಸಕ ತಂಗಡಗಿ ಸಹೋದರ ನಾಪತ್ತೆ

Update: 2017-07-28 11:04 GMT

ತಂಗಡಗಿ, ಜು.28: ಮಾಜಿ ಸಚಿವ, ಶಾಸಕ ಶಿವರಾಜ್ ತಂಗಡಗಿಯವರ ಎರಡನೆ ಸಹೋದರ ನಾಪತ್ತೆಯಾಗಿರುವ ಬಗ್ಗೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವರಾಜ್ ತಂಗಡಗಿಯವರ ಸಹೋದರ ನಾಗರಾಜ್ ತಂಗಡಗಿ ನಾಪತ್ತೆಯಾಗಿರುವವರು. ನಾಗರಾಜ್ ಜು.24ರಿಂದ ಕಾಣೆಯಾಗಿರುವುದಾಗಿ ಇವರ ಇನ್ನೋರ್ವ ಸಹೋದರ ರವಿ ತಂಗಡಗಿ ಎಂಬವರು ಪೊಲೀಸ್ ದೂರು ನೀಡಿದ್ದಾರೆ.

ನಾಗರಾಜ್ ತಂಗಡಗಿ ಜು.24ರಂದು ಕ್ಷೌರ ಮಾಡಿಸಿಕೊಂಡು ಬರುವುದಾಗಿ ಹೋದವರು ಕಾರಟಗಿಯಿಂದ ನಾಪತ್ತೆಯಾಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಾರಟಗಿ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News