ನೆಟ್ಟೆಕೆರೆಹಳ್ಳಿಗೆ ಸಾರಿಗೆ ಬಸ್: ಗ್ರಾಮಸ್ಥರ ಸಂಭ್ರಮ

Update: 2017-07-28 11:08 GMT

ಚಿಕ್ಕಮಗಳೂರು, ಜು.28: ಸಮೀಪದ ನೆಟ್ಟೆಕೆರೆಹಳ್ಳಿಗೆ ಬೆಳೆಗ್ಗೆ 8.30ಕ್ಕೆ ಮತ್ತು ಸಂಜೆ 5.30ಕ್ಕೆ ಕರ್ನಾಟಕ ರಾಜ್ಯ ಸಾರಿಗೆ ಬಸ್ಸು ಶುಕ್ರವಾರದಿಂದ ಸಂಚರಿಸುವ ಮೂಲಕ ಬಹುದಿನದ ಬೇಡಿಕೆ ಈಡೇರಿಕೆಯಾಗಿದ್ದಕ್ಕೆ ಸ್ಥಳೀಯರು ಹರ್ಷಗೊಂಡರು.
ಜು.4ರಂದು ನೆಟ್ಟೆಕೆರೆಹಳ್ಳಿಯಲ್ಲಿ ಕರ್ತಿಕೆರೆ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆದಿತ್ತು. ಅಂದು ಗ್ರಾಮಸ್ಥರು ಬಸ್ ಸೇರಿದಂತೆ ಹಲವು ಬೇಡಿಕೆಗಳನ್ನು ಕೇಳಿದ್ದರು. ಈ ಸಂಧರ್ಭದಲ್ಲಿ ಹಾಜರಿದ್ದ ಅರಣ್ಯ ವಿಹಾರಧಾಮಗಳ ಅಧ್ಯಕ್ಷ ಎ.ಎನ್.ಮಹೇಶ್‌ರವರು ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಸರಕಾರಿ ಬಸ್ ಸಂಚರಿಸುವಂತೆ ಮಾಡಲು ಸೂಚನೆ ನೀಡಿದ್ದರು.
  
ನೆಟ್ಟೆಕೆರೆಹಳ್ಳಿ, ಬಿಳೆಕಲ್ಲು ಹಾಗೂ ಕುರುವಂಗಿಯಿಂದ ನೂರಾರು ಜನರು ಉದ್ಯೋಗ ಹಾಗೂ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ನಗರಕ್ಕೆ ಬರುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಊರಿಗೆ ತೆರಳಲು ಬಸ್ಸು ಇಲ್ಲದ್ದರಿಂದ, ಈ ಭಾಗದ ಜನರಿಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿದ ಇಲಾಖೆ ಪಕ್ಷದ ಮುಖಂಡರ ಕೋರಿಕೆಯಂತೆ ಬಸ್ಸು, ಬಿಟ್ಟಿರುವುದಕ್ಕೆ ಇಲಾಖೆಗೆ ಹಾಗೂ ಪಕ್ಷದ ನಾಯಕರುಗಳಿಗೆ ಹೋಬಳಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗ್ರಾಮದ ನಾಗೇಶ್ ಗ್ರಾಮದ ಜನರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

 ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಮಂಜೇಗೌಡ, ಹೋಬಳಿ ಅಧ್ಯಕ್ಷ ನಾಗಭೂಷಣ್, ಗ್ರಾಪಂ ಸದಸ್ಯರಾದ ನಾಗಮ್ಮ ತಮ್ಮೇಗೌಡ, ಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ದಾನೇಗೌಡ, ಗ್ರಾಮಸ್ಥರಾದ ಮಧು, ವಿಜಿಯೇಂದ್ರ, ಕುಮಾರ್ ಸಿಹಿ ಹಂಚಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News