ನನೆಗುದಿಗೆ ಬಿದ್ದಿರುವ ಕಟ್ಟಡ ಕಾಮಗಾರಿ ನಡೆಸದಿದ್ದರೆ ಪ್ರತಿಭಟನೆ: ಎಚ್ಚರಿಕೆ

Update: 2017-07-28 11:19 GMT

ಮೂಡಿಗೆರೆ, ಜು.28: ನೆನೆಗುದಿಗೆ ಬಿದ್ದಿರುವ ಸಮುದಾಯ ಭವನ ಕಾಮಗಾರಿಯನ್ನು ಒಂದು ವಾರದಲ್ಲಿ ಪ್ರಾರಂಬಿಸದಿದ್ದರೆ ಆ.4 ರಂದು ಪಾಳು ಬಿದ್ದಿರುವ ಕಟ್ಟಡದ ಮುಂದೆ ಪ್ರತಿಭಟನೆ ಮಾಡುವುದಾಗಿ ಪೀಸ್ ಅಂಡ್ ಅವರ್‌ನೇಸ್ ಟ್ರಸ್ಟ್ ಪದಾಧಿಕಾರಿಗಳು ಎಚ್ಚರಿಕೆ ನೀಡಿ ಹೆಸ್ಗಲ್ ಗ್ರಾಪಂ ಪಿಡಿಓ ಎಸ್.ವಿಂದ್ಯಾರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

ಹೆಸ್ಗಲ್ ಗ್ರಾಪಂ ವ್ಯಾಪ್ತಿಯ ಬಿಳಗುಳದ ಕೆ.ಎಂ. ರಸ್ತೆಯಲ್ಲಿ ಹಾಳು ಕೆರೆಯಲ್ಲಿ ಸುಮಾರು 3 ವರ್ಷಗಳ ಹಿಂದೆ ಸಮುದಾಯ ಭವನದ ಕಟ್ಟಡ ಕಾಮಗಾರಿ ನಡೆದಿತ್ತು. ಆದರೆ ಕಟ್ಟಡದ ಕೆಲಸ ಇದುವರೆಗೂ ಪೂರ್ತಿಯಾಗದೆ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿಲ್ಲದೆ, ಲಕ್ಷಾಂತರ ರೂ.ಗ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಪಾಳು ಬಿದ್ದಿದೆ. ಹೀಗಿರುವಾಗ ಯಾವುದೇ ಜನಪ್ರತಿನಿಧಿಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಹೆಸ್ಗಲ್ ಗ್ರಾಮದ ಬಹುತೇಕ ಗಲ್ಲಿ ರಸ್ತೆಗಳು ಹದಗೆಟ್ಟಿದೆ. ಸಾರ್ವಜನಿಕರಿಗೆ ಹಾಗೂ ಶಾಲಾ ವಿಧ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಆದಷ್ಟು ಬೇಗ ರಸ್ತೆಗಳನ್ನು ಹಾಗೂ ಪಾಳು ಬಿದ್ದಿರುವ ಸಮುದಾಯ ಭವನವನ್ನು ಸರಿಪಡಿಸಬೇಕು ಎಂದು ಪೀಸ್ ಅಂಡ್ ಅವೆರ್ನೆಸ್ ಟ್ರಸ್ಟ್ ಪದಾಧಿಕಾರಿಗಳಾದ   ಅಲ್ತಾಫ್, ಬಿಳಗುಳ, ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಅಝೀರ್, ಮೂಡಿಗೆರೆ ತಾಲ್ಲೂಕು ಅ  ್ಯಕ್ಷರಾದ ಮುಹಮ್ಮದ್ ಶಫೀಕ್, ಸದಸ್ಯರಾದ ನಝೀರ್, ಇರ್ಶಾದ್, ಅಝರುದ್ದೀನ್, ಆದಿಲ್, ನಯಾರ್ ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News