ರೈತ ಆತ್ಮಹತ್ಯೆ

Update: 2017-07-28 11:34 GMT

ಚಿಕ್ಕಮಗಳೂರು, ಜು.28: ಸಾಲದ ಭಾದೆ ತಾಳಲಾರದೇ ಕೃಷಿಕರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತರೀಕೆರೆ ಪೊಲಿಸ್ ಠಾಣೆ ವ್ಯಾಪ್ತಿಯ ಎಂ.ಸಿ.ಹಳ್ಳಿ ಎಂಬಲ್ಲಿ ನಡೆದಿದೆ.

ಮೃತನನ್ನು ಎಂ.ಸಿ.ಹಳ್ಳಿಯ ಗಿರಿಯಪ್ಪ(58) ಎಂದು ಗುರುತಿಸಲಾಗಿದೆ. ಈತ ಕಳೆದ 4 ವರ್ಷಗಳ ಹಿಂದೆ ಜಮೀನಿಗೆ ನೀರಾವರಿಗಾಗಿ ಕೊಳವೆ ಬಾವಿ ತೋಡಿಸಲು ಸಾಲ ಮಾಡಿಕೊಂಡಿದ್ದರು. ಆದರೆ ಕೊಳವೆ ಬಾವಿಯಲ್ಲಿ ಸರಿಯಾಗಿ ನೀರು ಬಂದಿರಲಿಲ್ಲ. ಈ ನಡುವೆ ಭದ್ರಾ ಚಾನಲ್‌ನಲ್ಲಿ ಬರಗಾಲದಿಂದ ನೀರು ಹರಿಯದೆ ಬೆಳೆ ಬೆಳೆಯಲು ಸಾದ್ಯವಾಗಿರಲಿಲ್ಲ.

ತಮಗಿದ್ದ ಅಡಿಕೆ ತೋಟಕ್ಕೆ ನೀರು ಹಾಯಿಸಲು ಟ್ಯಾಂಕರ್ ಮೂಲಕ ನೀರು ತಂದು ಸುರಿಯಲು ಹಲವರಿಂದ ಕೈಗಡ ರೂಪದಲ್ಲಿ ಸಾಲ ಮಾಡಿಕೊಂಡಿದ್ದರು. ಆದರೆ ಬರಗಾಲದಿಂದ ಅಡಿಕೆ ಫಸಲು ಸರಿಯಾಗಿ ಬಂದಿರಲಿಲ್ಲ. ಇದರಿಂದ ಸಾಲ ಕೊಡಲು ಸಾದ್ಯವಾಗದೇ ಮನನೊಂದು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News