ಝಮೀರ್ ಅಹಮ್ಮದ್‌ಗೆ ಚುನಾವಣೆಯಲ್ಲಿ ಸ್ಪರ್ದೆಗೆ ಅವಕಾಶ ಕೊಡದಿರಲು ಬಿ.ಕೆ. ಮಂಜುನಾಥ್ ಆಗ್ರಹ

Update: 2017-07-28 11:51 GMT

ಹಾಸನ, ಜು.28: ಮುಂದೆ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಝಮೀರ್ ಅಹಮದ್‌ಗೆ ಸ್ಪರ್ದೆ ಮಾಡಲು ಅವಕಾಶ ಕೊಡಬಾರದು ಎಂದು ಬಿಜೆಪಿ ಮುಖಂಡ ಬಿ.ಕೆ. ಮಂಜುನಾಥ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, 2018ರ ವಿಧಾನಸಭಾ ಚುನಾಚಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ದೆ ಮಾಡುವವರು ಗೆಲುವು ಸಾಧಿಸುವುದಿಲ್ಲ. ಒಂದು ವೇಳೆ ಗೆದ್ದರೆ ನನ್ನ ರುಂಡವನ್ನು ಕತ್ತರಿಸಿಕೊಳ್ಳುವೇ ಎಂಬ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಭಾರತ ದೇಶದ ಸಂವಿಧಾನದ ಪ್ರಕಾರ ಇಂತಹ ಹಳಿಕೆ ಕೊಡುವುದು ಕಾನೂನು ರೀತಿ ಅಪರಾಧವಾಗಿದೆ. ಕೂಡಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸುಮೋಟೋ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಚುನಾವಣೆಯಲ್ಲಿ ಏನಾದರೂ ಜಮೀರ್ ಅಹಮದ್ ಸೋತು ಅವರು ಹೇಳಿದಂತೆ ನಡೆದುಕೊಂಡು ಅನಾಹುತ ಸಂಭವಿಸಿದರೇ ಸಾರ್ವಜನಿಕರಿಂದ ಒಂದು ಕೋಟಿ ರೂ. ಹಣ ಸಂಗ್ರಹಿಸಿ ಅವರ ಕುಟುಂಬ ವರ್ಗಕ್ಕೆ ನಾವು ಪರಿಹಾರ ನೀಡುವುದಾಗಿ ಭರವಸೆ ನುಡಿದರು. 2018ರ ಚುನಾವಣೆಗೆ ಝಮೀರ್ ಅಹಮದ್ ಅವರನ್ನು ನಿಲ್ಲಿಸಲು ಅವಕಾಶ ಕೊಡಬಾರದು. ಏನಾದರೂ ಸ್ಪರ್ದೆ ಮಾಡಿದರೂ ಚುನಾವಣೆ ಆಯೋಗ ಗಮನಿಸಿ ಅವರ ನಾಮಪತ್ರವನ್ನು ತಿರಸ್ಕೃತ ಆಗುವಂತೆ ಅಫಿಡೆವಿಟ್ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಎಚ್ಚರಿಸಿದರು.

ಚುನಾವಣೆ ಅಧಿಕಾರಿಗಳು ಯಾವುದೇ ಅನಾಹುತಕ್ಕೆ ಅವಕಾಶ ಮಾಡಿಕೊಡದೆ ಜಮೀರ್ ಅಹಮದ್ ಅವರು ಚುನಾವಣೆಯಲ್ಲಿ ಸ್ಪರ್ದೆ ಮಾಡದಂತೆ ನಾಮಪತ್ರವನ್ನು ಅಸಿಂಧುಗೊಳಿಸಲು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸರಕಾರಿ ಕಲಾ ಕಾಲೇಜಿನ ನಿವೃತ್ತ ಡಿ.ಸಿ. ಬಸವರಾಜು, ಬಿಜೆಪಿ ಮುಖಂಡ ಡಿ.ವೈ. ಗೋಪಾಲ್, ಗೋವಿಂದಶೆಟ್ಟಿ, ಮಂಜುನಾಥಶರ್ಮ, ಜಿಪಂ ಮಾಜಿ ಸದಸ್ಯ ಪುಟ್ಟಸ್ವಾಮಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News