ಧರಂ ಸಿಂಗ್ ನಿಧನಕ್ಕೆ ಕಂಬನಿ ಮಿಡಿದ ಕೊಡಗು ಕಾಂಗ್ರೆಸ್

Update: 2017-07-28 12:00 GMT

ಮಡಿಕೇರಿ, ಜು.28 : ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ನಿಧನದ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸಂತಾಪ ಸಭೆ ನಡೆಯಿತು. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿ ಮೌನಾಚರಣೆ ಮಾಡಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮುಕ್ಕಾಟಿರ ಶಿವುಮಾದಪ್ಪ ಮಾತನಾಡಿ, 7 ಬಾರಿ ಶಾಸಕರಾಗಿ, ಸಂಸದರಾಗಿ, ವಿವಿಧ ಖಾತೆಗಳ ಮಂತ್ರಿಗಳಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ವಿರೊಧ ಪಕ್ಷದ ನಾಯಕರಾಗಿ ಸುದೀರ್ಘ ಅವಧಿ ರಾಜಕಾರಣದಲ್ಲಿ ಗುರುತಿಸಿಕೊಂಡು ಸಜ್ಜನ ರಾಜಕರಣಿ ಎಂದೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸೇವೆ ಸಲ್ಲಿಸಿದ್ದ ಧರ್ಮಸಿಂಗ್ ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು. ಅವರ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಿ.ಪಿ. ಸುರೇಶ್, ಎಸ್.ಎಮ್.ಚಂಗಪ್ಪ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ವಿ.ಪಿ. ಶಸಿಧರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತನ್ನಿರಾ ಮೈನಾ, ಡಿಸಿಸಿ ಸದಸ್ಯೆ ಬಿದ್ದಂಡ ಸುಮಿತಾ ಮಾದಪ್ಪ, ಕಾಂಗ್ರೆಸ್ ನಗರಾಧ್ಯಕ್ಷರಾದ ಕೆ.ಯು.ಅಬ್ದುಲ್ ರಜಾಕ್, ಹಿರಿಯ ಮುಖಂಡರಾದ ವಾಸು ಕುಟ್ಟಪ್ಪ, ಪ್ರಮುಖರಾದ ಪುಷ್ಪ ಪೂಣಚ್ಚ, ಹನೀಫ್, ಪೊನ್ನಂಪೇಟೆಯ ಎ.ಎ.ಅಹಮ್ಮದ್, ಕೊಲ್ಲಿರ ಬೋಪಣ್ಣ, ಚಟ್ಟಂಗಡ ಅಭಿನ್, ಕಡೇಮಾಡ ಕುಸುಮ, ಸ್ವರ್ಣಲತಾ, ಹೊಟ್ಟೆಯಂಡ ಪಾರ್ವತಿ, ಪ್ರಭು ರೈ, ತೋಲಂಡ ನಾಣಯ್ಯ, ಬಾಚಿಮಂಡ ಲವ, ಸುಂಟಿಕೊಪ್ಪ ವಿಜಯನ್, ಸುಮಂತ್, ಮೀದೇರಿರ ನವೀನ್, ಕುಞಂಗಡ ಬೋಸ್ ಸೇರಿದಂತೆ ಕಾರ್ಯಕರ್ತರು ಹಿರಿಯ ರಾಜಕಾರಣಿಯ ಅಗಲಿಕೆಗೆ ಕಂಬನಿ ಮಿಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News