’ಆಪರೇಷನ್ ಅಲಮೇಲಮ್ಮ’ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ: ನಿರ್ದೇಶಕ ಸುನೀಲ್

Update: 2017-07-29 10:19 GMT

ಶಿವಮೊಗ್ಗ, ಜು. 29: ಒಂದು ಅಪಹರಣದ ಸುತ್ತ ನಡೆಯುವ ಕುತೂಹಲಕಾರಿ ಕಥೆಯನ್ನು ಚಿತ್ರದ ಮೂಲಕ ಪ್ರೇಕ್ಷಕರೆದುರು ತಂದಿದ್ದು, ಅದನ್ನು ಪ್ರೇಕ್ಷಕರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ಆಪರೇಷನ್ ಅಲಮೇಲಮ್ಮ ನಿರ್ದೇಶಕ ಸುನೀಲ್ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದ ನಾಯಕನಟ ರಿಷಿಗೆ ಇದು ಮೊದಲನೇ ಚಿತ್ರವಾಗಿದ್ದು, ಇವರ ನಟನೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಒಬ್ಬ ಅಮಾಯಕ ಹುಡುಗ ತಾನು ಮಾಡದ ತಪ್ಪಿಗೆ ಹೇಗೆ ಪೊಲೀಸರಿಂದ ಹಿಂಸೆ ಅನುಭವಿಸುತ್ತಾನೆ ಮತ್ತು ನಿಜವಾದ ಅಪಹರಣಕಾರರು ಎಂಬುದರ ಸುತ್ತ ನಡೆಯುವ ರೋಚಕ ಕಥೆಯೇ ಆಪರೇಷನ್ ಅಲಮೇಲಮ್ಮ ಎಂದರು.

ಚಿತ್ರದ ನಾಯಕ ರಿಷಿ ಮಾತನಾಡಿ, ಚಿತ್ರಕ್ಕೆ ಬೆಂಗಳೂರು ಶಿವಮೊಗ್ಗ ಹಾಸನ ಮೈಸೂರುಗಳಲ್ಲಿ ಉತ್ತಮವಾದ ಪ್ರತಿಕ್ರಿಯೆ ದೊರಕಿದೆ. ಬೆಳಗ್ಗಿನ ಆಟದ ಎಲ್ಲಾ ಟಿಕೆಟ್‌ಗಳು ಮುಂಗಡವಾಗಿ ಕಾಯ್ದಿರಿಸಿ ಪ್ರೇಕ್ಷಕರು ನಮಗೆ ಆಶೀರ್ವಾದ ಮಾಡಿದ್ದಾರೆ. ಒಬ್ಬ ಹೊಸ ನಟನ ಚಿತ್ರಕ್ಕೆ ಈ ರೀತಿಯ ಪ್ರತಿಕ್ರಿಯೆ ದೊರೆತಿರುವುದು ಇದೇ ಮೊದಲು ಎಂದರು.

ಚಿತ್ರವನ್ನು ಮುಂದಿನ ದಿನಗಳಲ್ಲಿ ಯುಕೆ, ಅಮೇರಿಕಾ, ಆಸ್ಟ್ರೇಲಿಯಾ, ದುಬೈಗಳಲ್ಲಿಯೂ ಬಿಡುಗಡೆ ಮಾಡಬೇಕೆಂದು ಉದ್ದೇಶಿಸಿದ್ದೇವೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News