ಗೂಗಲ್ ನಲ್ಲಿ ಕೆಲಸ ಗಿಟ್ಟಿಸಿದ ಚಂಡೀಗಢದ ಸರಕಾರಿ ಶಾಲೆಯ ವಿದ್ಯಾರ್ಥಿ

Update: 2017-07-31 12:41 GMT

ಹೊಸದಿಲ್ಲಿ, ಜು.31:“ನನ್ನಂತಹ ಒಬ್ಬ ಸಾಮಾನ್ಯ ವಿದ್ಯಾರ್ಥಿ ಗೂಗಲ್ ನಲ್ಲಿ ಕೆಲಸ ಗಿಟ್ಟಿಸುತ್ತಾನೆ ಎಂದು ಯಾರಿಗೆ ಗೊತ್ತಿತ್ತು. ನನಗಾದ ಸಂತಸವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ.  ಕಠಿಣ  ಪರಿಶ್ರಮಕ್ಕೆ  ಸಂದ  ಪ್ರತಿಫಲ  ಇದು” ಎಂದು  ಹೇಳುತ್ತಾರೆ 12ನೆ ತರಗತಿಯ ಹರ್ಷಿತ್ ಶರ್ಮಾ.

ಚಂಡೀಗಢದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿರುವ ಇವರು ತಮ್ಮ ಗ್ರಾಫಿಕ್ 
ಡಿಸೈನಿಂಗ್ ಕೌಶಲ್ಯದಿಂದಾಗಿ ಗೂಗಲ್ ಗೆಆಯ್ಕೆಯಾಗಿದ್ದಾರೆ.

ಮೊದಲ ಒಂದು ವರ್ಷದ ಅವಧಿಗೆ ತಿಂಗಳಿಗೆ 4 ಲಕ್ಷ ರೂ. ವೇತನವನ್ನು ಹರ್ಷಿತ್ ಪಡೆಯಲಿದ್ದಾರೆ. ತರಬೇತಿಯ ನಂತರ ಹರ್ಷಿತ್ ತಿಂಗಳಿಗೆ 12 ಲಕ್ಷ ರೂ. ವೇತನಪಡೆಯಲಿದ್ದಾರೆ.

ತನ್ನ 10ನೆ ವರ್ಷದಲ್ಲಿಯೇ ಡಿಸೈನಿಂಗ್ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಹರ್ಷಿತ್ ತನ್ನ ಚಿಕ್ಕಪ್ಪನ ನೆರವಿನೊಂದಿಗೆ ಡಿಸೈನಿಂಗ್ ನಲ್ಲಿ ಪಳಗಿದ್ದರು. “ಗೂಗಲ್ ಗೆಆಯ್ಕೆಯಾಗುತ್ತೇನೆ ಎಂದು ನಾನು ಎಣಿಸಿರಲಿಲ್ಲ. ನನ್ನ ಚಿಕ್ಕಪ್ಪ ರೋಹಿತ್ ಶರ್ಮಾ ನನಗೆ ಗ್ರಾಫಿಕ್ ಡಿಸೈನಿಂಗ್ ಕಲಿಸಿದರು. ನಂತರ ನನಗೆ ಆಸಕ್ತಿ ಹುಟ್ಟಿ ಗೂಗಲ್ ನಲ್ಲಿಕೆಲಸ ಗಿಟ್ಟಿಸಲು ಪ್ರಯತ್ನಿಸಿದೆ. ನನ್ನ ಸಾಧನೆಗೆ ನನ್ನ ಚಿಕ್ಕಪ್ಪ ಕಾರಣ” ಎಂದು ಹರ್ಷಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News