ಸಿಜೆಐ,ರಾಜ್ಯಪಾಲರ ಹುದ್ದೆ ಆರ್‌ಟಿಐ ವ್ಯಾಪ್ತಿಯಲ್ಲಿಲ್ಲ: ಸರಕಾರ

Update: 2017-08-02 11:42 GMT

ಹೊಸದಿಲ್ಲಿ,ಆ.2: ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಮತ್ತು ರಾಜ್ಯಪಾಲರ ಹುದ್ದೆಗಳು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯ ವ್ಯಾಪ್ತಿಯಿಂದ ಹೊರತಾಗಿವೆ ಎಂದು ಸರಕಾರವು ಬುಧವಾರ ಸ್ಪಷ್ಟಪಡಿಸಿದೆ.

ಕೇಂದ್ರ ಮಾಹಿತಿ ಆಯೋಗದ ದಾಖಲೆಗಳಲ್ಲಿ ಸಿಜೆಐ ಮತ್ತು ರಾಜ್ಯಪಾಲರ ಹುದ್ದೆಗಳು ಸರಕಾರಿ ಹುದ್ದೆಗಳೆಂದು ನಮೂದಾಗಿಲ್ಲ ಎಂದು ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News