ಪಿಯುಸಿ ಉತ್ತೀರ್ಣರಾದವರಿಗೆ 100 ಶೇ. ಉದ್ಯೋಗ ಖಾತರಿಯೊಂದಿಗೆ ಪದವೀಧರರಾಗಲು ಸುವರ್ಣಾವಕಾಶ

Update: 2017-08-02 16:25 GMT

ಅಕೌಟಿಂಗ್ ಹಾಗೂ ಅಡ್ಮಿನಿಸ್ಟ್ರೇಶನ್ ನಲ್ಲಿ ಉದ್ಯೋಗ ಆಧಾರಿತ ವಸತಿ ಕೌಶಲ್ಯ ಅಭಿವೃದ್ಧಿ ಯೋಜನೆಗಾಗಿ ಮುಸ್ಲಿಮ್ ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಶನ್ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

 “ಅರ್ನ್ ವೈಲ್ ಯು ಲರ್ನ್’ ಎಂಬ ಹೆಸರಿನ ಈ ಯೋಜನೆಯನ್ನು ಎಚ್ ಟಿ ಕಾರ್ಪ್ಸ್ ಫೌಂಡೇಶನ್ ನೊಂದಿಗೆ ಆರಂಭಿಸಲಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳು 4  ತಿಂಗಳ ತರಬೇತಿಯ ನಂತರ ಬೆಂಗಳೂರಿನಲ್ಲಿ ವಸತಿ ವ್ಯವಸ್ಥೆ, 100 ಶೇ. ಜಾಬ್ ಪ್ಲೇಸ್ ಮೆಂಟ್ ಖಾತರಿ ಪಡೆಯಲಿದ್ದಾರೆ. ಈ ಕಾರ್ಯಕ್ರಮದಡಿ ತರಬೇತಿ ಪಡೆದ ವಿದ್ಯಾರ್ಥಿಗಳು  4  ತಿಂಗಳ ನಂತರ ಉದ್ಯೋಗದೊಂದಿಗೆ ಬಿ.ಕಾಂ ಪದವಿಯನ್ನು ಪಡೆಯಬಹುದು.

ಯೋಜನೆಯ ಪ್ರಮುಖಾಂಶಗಳು:

ಚಾರ್ಟರ್ಡ್ ಅಕೌಂಟೆಂಟ್ಸ್ ಮತ್ತು ಉದ್ಯಮ ಪರಿಣಿತರಿಂದ 4  ತಿಂಗಳ ಉದ್ಯಮ ತರಬೇತಿ, ತರಬೇತಿಯ ನಂತರ ಪ್ಲೇಸ್ ಮೆಂಟ್ ಹಾಗೂ ಬಿಕಾಂ ಪದವಿಯೊಂದಿಗೆ ಉದ್ಯೋಗ, ಬಿಕಾಂ ವಾರ್ಷಿಕ ಪರೀಕ್ಷೆಗಾಗಿ ವಿಶೇಷ ಸಿದ್ಧತೆ, ಭಾರತೀಯ ಹಾಗೂ ವಿದೇಶಿ ಅಕೌಂಟಿಂಗ್ ಆಧಾರದಲ್ಲಿ ಅಕೌಂಟ್ಸ್ ನಿರ್ವಹಣೆ, ಸಾರ್ವಜನಿಕ ಕಂಪೆನಿಗಳು, ಖಾಸಗಿ ಕಂಪೆನಿಗಳು, ಸಹಭಾಗಿತ್ವ ಹಾಗೂ ಎಲ್ ಎಲ್ ಪಿ, ಆಸ್ಪತ್ರೆ, ಕಾಲೇಜುಗಳು ಹಾಗೂ ಇತರ ಲಾಭರಹಿತ ಸಂಸ್ಥೆಗಳ ಅಕೌಂಟಿಂಗ್, ವಿವಿಧ ಉದ್ಯಮಗಳಿಗೆ ಅಕೌಂಟಿಂಗ್, ಕಾಸ್ಟ್ ಅಕೌಂಟಿಂಗ್ ಹಾಗೂ ಮ್ಯಾನೇಜ್ ಮೆಂಟ್ ಅಕೌಂಟಿಂಗ್ ನಲ್ಲಿ ಪರಿಣತಿ, ಸುಧಾರಿತ ಎಕ್ಸೆಲ್ ತಯಾರಿ, ಜಿಎಸ್ ಟಿ-ಟಿಡಿಎಸ್-ಆದಾಯ  ತೆರಿಗೆ ಫೈಲಿಂಗ್, ಪಿಎಫ್, ಇಎಸ್ ಐ, ಮಲ್ಟಿ ಟಾಸ್ಕ್ ಮ್ಯಾನೇಜ್ ಮೆಂಟ್, ಸಂದರ್ಶನ ಎದುರಿಸುವ ನೈಪುಣ್ಯತೆ, ಸ್ಪೋಕನ್ ಇಂಗ್ಲಿಷ್ ತರಗತಿಗಳು, ಡಾಟಾಬೇಸ್ ಮ್ಯಾನೇಜ್ ಮೆಂಟ್ ಹಾಗೂ ಲೈವ್ ಡಾಟಾದೊಂದಿಗೆ ಪ್ರಾಯೋಗಿಕ ತರಬೇತಿ.

ಟ್ಯಾಲಿ ಇಆರ್ ಪಿ, ಓಡೂ. ಎಂಎಸ್ ಆಫಿಸ್, ವಿಂಡೋಸ್ ಸಾಫ್ಟ್ ವೇರ್ ಗಳ ತರಬೇತಿ.

ಕುಟುಂಬದ ಆರ್ಥಿಕ ಸಹಾಯವಿಲ್ಲದೆ ವಿದ್ಯಾರ್ಥಿಗಳು ಬಿ.ಕಾಂ. ಪದವೀಧರರಾಗುವುದು, ಕಲಿಕೆ ಹಾಗು ಉದ್ಯಮ ಅನುಭವದ ನಡುವಿನ ಅಂತರ ತುಂಬುವುದು, ಉದ್ಯಮದ ಸಮಯದಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳನ್ನು ತಯಾರುಗೊಳಿಸುವುದು ಯೋಜನೆಯ ಉದ್ದೇಶವಾಗಿದೆ.

ಅಭ್ಯರ್ಥಿಗಳಿಗೆ ಮೂಲಸೌಕರ್ಯ ಸೌಲಭ್ಯಗಳು, ಆಹಾರ ಮತ್ತು ಹಾಸ್ಟೆಲ್ ಸೌಕರ್ಯಗಳು ಸಿಗಲಿದೆ. ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ಸಮಾನ ಕೋರ್ಸ್ ಗಳನ್ನು ಮಾಡಿರಬೇಕು. ಆಗಸ್ಟ್ 6 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಗಸ್ಟ್ 7ರಿಂದ ತರಬೇತಿ ಆರಂಭವಾಗಲಿದೆ.  ಹೆಚ್ಚಿನ ಮಾಹಿತಿಗಾಗಿ ಇ ಮೇಲ್ ವಿಳಾಸ admin@miaindia.net / secretary@miaindia.net ಅಥವಾ ರೇಷ್ಮಾ (9036985451) ಹಾಗೂ ಝಫರ್ (9880008744)ರನ್ನು ಸಂಪರ್ಕಿಸಬಹುದು.

ವಿಳಾಸ: ಮುಸ್ಲಿಮ್ ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಶನ್, ನಂ.332, ದಾರುಸ್ಸಲಾಮ್ ಕಟ್ಟಡ, ಕ್ವೀನ್ಸ್ ರೋಡ್, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News