ಅಧ್ಯಾಪಕನಿಗೆ ಥಳಿಸಿದ ಬಿಜೆಪಿ ನಾಯಕರ ಸಹಿತ 15 ಮಂದಿಯ ವಿರುದ್ಧ ಕೇಸು ದಾಖಲು

Update: 2017-08-03 10:40 GMT

ಕಲ್ಲಿಕೋಟೆ,ಆ.3: ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ನಕಲಿ ರಸೀದಿ ಸೃಷ್ಟಿಸಿ ಹಣ ಸಂಗ್ರಹಿಸಿದ ಘಟನೆಯನ್ನು ಬಯಲಿಗೆಳಿದ ಕಾಲೇಜು ಅಧ್ಯಾಪಕನಿಗೆ ಹಲ್ಲೆ ನಡೆಸಿ, ಬೆದರಿಕೆಯೊಡ್ಡಿದ ಬಿಜೆಪಿ ಸ್ಥಳೀಯ ನಾಯಕರ ಸಹಿತ ಹದಿನೈದು ಮಂದಿಯ ವಿರುದ್ಧ ಕೇಸು ದಾಖಲಾಗಿದೆ. ಚೆರಂಡತ್ತುರ್ ಮಲಬಾರ್ ಹೈಯರ್ ಎಜುಕೇಶನಲ್ ಸೊಸೈಟಿ ಆಟ್ರ್ಸ್, ಆಂಡ್ ಸೈನ್ಸ್ ಕಾಲೇಜು(ಎಂ. ಎಚ್. ಇ.ಎಸ್) ಕಾಮರ್ಸ್ ಅಧ್ಯಾಪಕ ಶಶಿಕುಮಾರ್‍ರನ್ನು ಥಳಿಸಿದ ಘಟನೆಯಲ್ಲಿ ಬಿಜೆಪಿ ಕುಟ್ಯಾಡಿ ಮಂಡಲಂ ಅಧ್ಯಕ್ಷ ಪಿ.ಪಿ. ಮುರಳಿ, ಪ್ರಧಾನ ಕಾರ್ಯದರ್ಶಿ ಎಡಕ್ಕುಯಿ ಮನೋಜ್, ವಿಲ್ಯಾಪ್ಪಳ್ಳಿ ಪಂಚಾಯತ್ ಸಮಿತಿ ಅಧ್ಯಕ್ಷ ಪ್ರಭೇಶ್ ಪೊನ್ನಕ್ಕಾರಿ. ಕಾರ್ಯದರ್ಶಿ ಸುನೀಲ್ ಮೊದಲಾದವರ ವಿರುದ್ಧ ಪಯ್ಯೋಳಿ ಪೊಲೀಸರು ಕೇಸು ದಾಖಲಿಸಿದ್ದಾರೆ.

ಥಳಿತಕ್ಕೊಳಗಾದ ಶಶಿಕುಮಾರ್ ಬಿಜೆಪಿ ಮಯ್ಯನ್ನೂರ್ ಬೂತ್ ಅಧ್ಯಕ್ಷ ನಾಗಿದ್ದಾರೆ. ಕಾಲೇಜು ಮ್ಯಾನೇಜ್‍ಮೆಂಟ್ ಸಮಿತಿಯ ಪ್ರಧಾನ ಕಾರ್ಯದರ್ಶಿಯ  ಕೋಣೆಯಲ್ಲಿದ್ದಾಗ ಬಂದ ಬಿಜೆಪಿಯ ಗುಂಪು ಶಶಿಕುಮಾರ್‍ಗೆ ಥಳಿಸಿ ಕೊಲ್ಲುವ ಬೆದರಿಕೆಯೊಡ್ಡಿತ್ತು. ಕಲ್ಲಿಕೋಟೆಯಲ್ಲಿ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮ್ಮೇಳನಕ್ಕೆ ನಕಲಿ ರಸೀದಿ ತಯಾರಿಸಿ ಹಣ ಸಂಗ್ರಹಿಸಿದ್ದರ ದಾಖಲೆಗಳು ಈಗಾಗಲೇ ಬಹಿರಂಗಗೊಡಿದೆ.ವಡಗರದ ಓರ್ವ ಅಧ್ಯಕ್ಷ ಇಂತಹ ನಕಲಿ ರಸೀದಿ ತಯಾರಿಸಿ ಹಣ ಸಂಗ್ರಹಿಸಿದ್ದಾನೆಂದು ಆರೋಪಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News