ರಾಮಾಪುರ: ‘ಕಾನೂನು ಅರಿವು ನೆರವು’ ಕಾರ್ಯಕ್ರಮ

Update: 2017-08-07 06:22 GMT

ಹನೂರು, ಆ.7: ತಾಲೂಕು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಸಂತ್ರಸ್ತರ ಪರಿಹಾರ ಯೊಜನೆ ಮೂಲಭೂತ ಕರ್ತವ್ಯಗಳ ಕುರಿತು ‘ಕಾನೂನು ಅರಿವು ನೆರವು’ ಕಾರ್ಯಕ್ರಮವು ರಾಮಾಪುರ ಪೊಲೀಸ್ ಠಾಣೆಯಲ್ಲಿ ಇಂದು ಬೆಳಗ್ಗೆ ನಡೆಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಕೀಲ ಚಂದ್ರಶೇಖರ್, ಅಪರಾಧ ಪ್ರಕರಣಗಳಿಂದಾಗಿ ವೈಯಕ್ತಿಕ ಮತ್ತು ಆಸ್ತಿಪಾಸ್ತಿಗೆ ನಷ್ಟವುಂಟಾದಲ್ಲಿ ನಷ್ಟದ ಪ್ರಮಾಣಕ್ಕನುಗುಣವಾಗಿ ಪರಿಹಾರ ಕಲ್ಪಿಸುವ ಸಂತ್ರಸ್ತರ ಪರಿಹಾರ ಯೋಜನೆ 2011ರಿಂದಲೂ ಜಾರಿಯಲ್ಲಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.

ಪ್ರತಿಯೊಂದು ಅಪರಾಧ ಕೃತ್ಯಗಳಲ್ಲೂ ನೊಂದವರಿಗೆ, ಸಂತ್ರಸ್ತರಿಗೆ ಆಸ್ತಿ-ಪಾಸ್ತಿ ನಷ್ಟವುಂಟಾದಲ್ಲಿ ಕಾನೂನು ಪ್ರಾಧಿಕಾರದ ಮೂಲಕ ಪರಿಹಾರ ಪಡೆಯಲು ಅವಕಾಶವಿದೆ. ಆದರೆ ಇದುವರೆಗೂ ಯಾರೊಬ್ಬರು ಈ ಯೋಜನೆಯನ್ನು ಸದುಪಯೊಗ ಪಡೆದುಕೊಳ್ಳಲು ಮುಂದೆ ಬಂದಿಲ್ಲ ಎಂದವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಮಾಪುರ ವೃತ್ತ ನೀರಿಕ್ಷಕ ಶಿವಸ್ವಾಮಿ, ಇಲಾಖೆಯ ಸಿಬ್ಬಂದಿ ಹಾಗೂ ರಾಮಾಪುರ ಸುತ್ತಮುತ್ತ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News