ಹನೂರು: ವಿಚಾರಗೋಷ್ಟಿ, ಕಾರ್ಯಕ್ರಮ

Update: 2017-08-08 12:31 GMT

ಹನೂರು, ಆ.8: ಸ್ವಚ್ಚ ಭಾರತ, ವಿಜ್ಞಾನ ತಂತ್ರಜ್ಞಾನಗಳ ಬಳಕೆ, ಸವಾಲುಗಳು ಎಂಬ ವಿಷಯದ ಬಗ್ಗೆ ಡಯಟ್ ಚಾಮರಾಜನಗರ ಮತು ಸಮನ್ವಯ ಸಂಪನ್ಮೂಲ ಅಧಿಕಾರಿಗಳು ಇವರ ಸಂಯುಕ್ತ ಆಶ್ರಯದಲ್ಲಿ ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ವಿಚಾರಗೋಷ್ಟಿಯನ್ನು ಆಯೋಜಿಸಲಾಗಿತ್ತು .
          
ಈ ವಿಚಾರಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಡಯಟ್ ಹಿರಿಯ ಉಪನ್ಯಾಸಕರಾದ ಮಂಜುನಾಥ್‌, ಭಾರತವು ತಂತ್ರಜ್ಙಾನದಲ್ಲಿ ಮುಂಚೂಣಿಯಲ್ಲಿದ್ದು ತಂತ್ರಜ್ಙಾನ ಬಳಕೆಯಿಂದ ಸ್ವಚ್ಚಭಾರತವನ್ನಾಗಿ ಪರಿವರ್ತಸುವ ಜವಬ್ದಾರಿಯು ಪ್ರತಿಯೊಬ್ಬ ನಾಗರೀಕನಲ್ಲಿಯೂ ಇದೆ. ಇದು ಕೇವಲ ಸರ್ಕಾರ ಯೋಜನೆಲ್ಲಾ ವಿಜ್ಙಾನ ಮತ್ತು ತಂತ್ರಜ್ಞಾನ ಶಿಕ್ಷಕರು ಮತ್ತು ವಿದ್ಯಾರ್ಥಿ ಜೀವನದಲ್ಲಿ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಶಿಸ್ತಿನ ಜೀವನ ರೂಪಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಸುತ್ತ ಮುತ್ತಲಿನ ಪರಿಸರ ನಿಮ್ಮ ಶಾಲಾ ಆವರಣ ನಿಮ್ಮ ಮನೆಗಳಲ್ಲಿ ಸ್ವಚ್ಚತೆ ಕಾಪಾಡಿಕೋಳ್ಳುವುದರ ಮುಂಖಾತರ ಸ್ವಚ್ಚಭಾರತ ಅಭಿಯಾನದಡಿ ಕೈ ಜೋಡಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಈ ವಿಚಾರ ಗೋಷ್ಠಿಯಲ್ಲಿ ಪ್ರಥಮ ಸ್ಥಾನ ಪಡೆದ ಕ್ರಿಸ್ತರಾಜ ಶಾಲೆಯ ತೇಜಸ್ವಿನಿ ದ್ವೀತಿಯ ಸ್ಥಾನವನ್ನು ಜೆಎಸ್ಎಸ್ ಶಾಲೆಯ ಮೌಲ್ಯ ಹಾಗೂ ತೃತಿಯ ಸ್ಥಾನ ಪಡೆದ ನಿರ್ಮಾಲ ಶಾಲೆಯ ವಿದ್ಯಾರ್ಥಿ ಸುಪ್ರಿತಾ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು
  
ಈ ಸಮಾರಂಭದಲ್ಲಿ ಡಯಟ್ ಉಪನ್ಯಾಸಕರಾದ ರಾಮಶೆಟ್ಟಿ ಬಿ. ಆರ್. ಸಿ. ಕಾರ್ತಿಕ್, ಬಿಆರ್‌ಪಿಗಳಾದ ಆಶೋಕ್, ಶ್ರೀನಿವಾಸ್ ನಾಯ್ಡು, ಸತೀಶ್, ಶಿವಕುಮಾರಿ ಶಿಕ್ಷಕರಾದ ಆನಂದ್ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News