ಹನುರು: ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ

Update: 2017-08-08 14:30 GMT

ಹನೂರು, ಆ.8: ಕಾಡನ್ನು ಉಳಿಸುವುದು ಪ್ರತಿಯೋಬ್ಬರ ನಾಗರೀಕನ ಕರ್ತವ್ಯ. ಹಾಗೂ ಅಗತ್ಯತೆ ಕೂಡ .ಕಾಡು ಮನುಷ್ಯನಿಗೆ ಮಾತ್ರ ಸೇರಿದ್ದಲ್ಲ್ಲ. ವನ್ಯಜೀವಿಗಳಿಗೂ ಸಹ ಸೇರಿದ್ದು, ಕಾಡನ್ನು ಸಂರಕ್ಷಿಸುವುದರ ಜೊತೆಗೆ ಅಲ್ಲಿರುವ ಪ್ರಾಣಿಗಳನ್ನು ರಕ್ಷಿಸಿಸೋಣ ಎಂದು ಜರ್ಮನಿಯ ಭಾರತ ದೇಶದ ರಾಯಭಾರಿಯಾದ ಮಾರ್ಗಿಟ್ ಹೆಲ್ವನ್ ಬೂಟೆ ಗ್ರಾಮಸ್ಥರಲ್ಲಿ ತಿಳಿ ಹೇಳಿದರು.

 ಲೋಕ್ಕನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ನೇಚರ್ ಕನ್ವರ್ವೇಷನ್ ಸಂಸ್ಥೆಯ ವತಿಯಿಂದ ಕಾಡಂಚಿನ ಗ್ರಾಮಸ್ಥರಿಗೆ ಉಚಿತವಾದ ಗ್ಯಾಸ್ ವಿತರಣಾ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಅವರು, ಈ ಯೊಜನೆಯ ಮೂಲ ಉದ್ದೇಶ ಕಾಡ್ಡಂಚಿನ ಗ್ರಾಮಗಳಲ್ಲಿ ಮಹಿಳೆಯರು ಸೌದೆಗಾಗಿ ಕಾಡನ್ನು ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಇದರಿಂದ ಕಾಡು ನಶಿಸಿ ಹೋಗುತ್ತಿದೆ. ಅಲ್ಲದೇ ಹೆಣ್ನು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಹಾಗೂ ಮಹಿಳೆಯರ ಭದ್ರತೆಯ ದೃಷ್ಠಿಯಂದ .ಜರ್ಮನ್ ಮತ್ತು ಭಾರತ ದೇಶಗಳು ಬಹಳ ಹೊಂದಾಣಿಕೆಯಿಂದ ಈ ಎರಡು ದೇಶಗಳ ಮುಖ್ಯವಾದ ಉದ್ದೇಶ ಅರಣ್ಯವನ್ನು ಸಂರಕ್ಷಣೆ ಹಾಗೂ ವನ್ಯಜೀನಿಗಳ ಸಂರಕ್ಷಣೆ ಯಾಗಿದೆ. ಆದ್ದುದರಿಂದ ಎಲ್‌ಪಿಜಿ ಗ್ಯಾಸ್ ಬಳಸಿ ಕಾಡನ್ನು ಸಂರಕ್ಷಸಿ ಎಂದು ತಿಳಿಸಿದರು.

ನಂತರ ಮಾತನಾಡಿದ ವನ್ಯಜೀವಿ ವಿಜ್ಞಾನಿಯಾದ ಸಂಜಯ್ ಗುಬ್ಬಿ, ಕಾಡಿನ ಜನರಿಗೆ ಕಾಡನ್ನು ಸಂರಕ್ಷಸಿ ಎಂಬುದರ ಹಲವಾರು ಘೋಷವಾಕ್ಯಗಳನ್ನು ಕೂಗಿ ತಿಳಿ ಹೇಳಿದರೆ ಸಾಲದು. ಈ ಕಾಡಂಚಿನ ಗ್ರಾಮಸ್ಥರು ಕಾಡನ್ನೇ ಹೆಚ್ಚಾಗಿ ಅವಲಂಬಿತರಾಗಿರುವ ಸಮಯದಲ್ಲಿ ಅವರಿಗೆ ಪರ್ಯಾಯ ಮಾರ್ಗವನ್ನು ಕೊಡುವ ಉದ್ದೇಶದಿಂದ ಈ ಕಾಡಂಚಿನ ಗ್ರಾಮಸ್ಥರಿಗೆ ಉಚಿತವಾದ ಗ್ಯಾಸ್ ವಿತರಣೆ ಮಾಡಲಾಗುತಿದೆ . ಈಗಾಗಲೇ 450 ಕ್ಕಿಂತ ಹೆಚ್ಚು ಕುಟುಂಬಗಳಿಗೆ ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕುಟುಂಬಗಳಿಗೆ ನೀಡಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜರ್ಮನಿ ಮೂಲದ ಗರ್ಟ ಬೂಟ್ಟೆ, ಜಿಲ್ಲಾ ಪಂಚಾಯತ್ ಸದಸ್ಯ ಮರಗದಮಣಿ, ಗ್ರಾಮಪಂಚಾಯತಿ ಅದ್ಯಕ್ಷ ರಂಗಶೆಟ್ಟಿ, ಉಪಾದ್ಯಕ್ಷೆ ಸುಮತಿ, ಜಿಲ್ಲಾ ಪತ್ರಕರ್ತರ ಸಂಘದ ಅದ್ಯಕ್ಷರಾದ ನಂದೀಶ್, ಮುಂಖರಾದ ರವಿ ಷಣ್ಮುಂಗ ಇನ್ನಿತರರು ಹಾಜರಿದ್ದರು .
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News