ಅಫ್ಘಾನ್‌ಗೆ ಹೆಚ್ಚುವರಿ ಮರೀನ್ ಸೈನಿಕರನ್ನು ಕಳುಹಿಸಲು ನಿರ್ಧಾರ

Update: 2017-08-08 14:39 GMT

ವಾಶಿಂಗ್ಟನ್, ಆ. 8: ಯುದ್ಧಗ್ರಸ್ತ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತದಲ್ಲಿನ ಆಂತರಿಕ ಭದ್ರತೆಯನ್ನು ಹೆಚ್ಚಿಸುವುದಕ್ಕಾಗಿ ಅಮೆರಿಕವು ಆ ದೇಶಕ್ಕೆ ಹೆಚ್ಚುವರಿ ಮರೀನ್ ಸೈನಿಕರನ್ನು ಕಳುಹಿಸುತ್ತಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಸಂಖ್ಯೆಯಲ್ಲಿ ನೂರಕ್ಕಿಂತ ಕಡಿಮೆಯಿರುವ ಹೆಚ್ಚುವರಿ ಮರೀನ್ ಸೈನಿಕರನ್ನು ಕಳುಹಿಸಿಕೊಡಲು ಅಮೆರಿಕದ ಸೆಂಟ್ರಲ್ ಕಮಾಂಡ್ ಒಪ್ಪಿದೆ. ಈ ಸೈನಿಕರು ಈಗಾಗಲೇ ‘ಟಾಸ್ಕ್‌ಫೋರ್ಸ್ ಸೌತ್‌ವೆಸ್ಟ್’ ಕಾರ್ಯಾಚರಣೆಯಲ್ಲಿ ತೊಡಗಿರುವ 300ಕ್ಕೂ ಅಧಿಕ ಮರೀನ್ ಸೈನಿಕರೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.

ಇದಕ್ಕೂ ಟ್ರಂಪ್ ಆಡಳಿತದ ನೂತನ ದಕ್ಷಿಣ ಏಶ್ಯ ತಂತ್ರಗಾರಿಕೆಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಮರೀನ್ ಬ್ರಿಗೇಡ್ ಜನರಲ್ ರೋಜರ್ ಟರ್ನರ್‌ರ ಬೇಡಿಕೆಯಂತೆ ಹೆಚ್ಚುವರಿ ಪಡೆಗಳನ್ನು ಅಲ್ಲಿಗೆ ಕಳುಹಿಸಿಲಾಗುತ್ತಿದೆ ಎಂದರು.

ಹೆಚ್ಚುವರಿ ಸೈನಿಕರನ್ನು ಕಳುಹಿಸುವ ಪ್ರಸ್ತಾಪಕ್ಕೆ ಜನರಲ್ ಜೋಸೆಫ್ ವೊಟೆಲ್ ಅನುಮೋದನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News