ಮುಂಬೈನಲ್ಲಿ ಪೊಲೀಸನಿಗೆ ತಪರಾಕಿಯ ವೀಡಿಯೊ ವೈರಲ್

Update: 2017-08-11 10:45 GMT

ಮುಂಬೈ,ಆ.11: ಮುಂಬೈನ ವಸಯಿಯಲ್ಲಿ ಸಂಚಾರ ಪೊಲೀಸ್‌ನೋರ್ವ ತನ್ನ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಬೈಕ್ ಸವಾರನಿಂದ ತಪರಾಕಿಗಳನ್ನು ತಿಂದಿದ್ದಾನೆ. ಬೈಕ್ ಸವಾರ ಸಿಗ್ನಲ್ ಉಲ್ಲಂಘಿಸಿದ್ದನೆಂದು ಪೊಲೀಸ್ ಕಾನಸ್ಟೇಬಲ್ ಕಾಳು ವಿಠಲ ಮುಂಢೆ ಆತನನ್ನು ತಡೆದು ನಿಲ್ಲಿಸಿದ್ದ. ಸೋಮವಾರ ನಡೆದಿತ್ತು ಎನ್ನಲಾಗಿರುವ ಈ ಘಟನೆಯ ವೀಡಿಯೊ ಈಗ ವೈರಲ್ ಆಗಿದೆ. 15 ಸೆಕೆಂಡ್‌ಗಳ ವೀಡಿಯೊ ತುಣುಕಿನಲ್ಲಿ ಬೈಕ್ ಸವಾರ ಎರಡು ಬಾರಿ ಪೊಲೀಸನ ಮೇಲೆ ಹಲ್ಲೆ ನಡೆಸಿರುವ ದೃಶ್ಯವಿದೆ.

 ವಸಯಿಯ ಪಾರ್ವತಿ ಕ್ರಾಸ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ತಾನು ಸಿಗ್ನಲ್ ಉಲ್ಲಂಘಸಿಲ್ಲ ಎಂದು ವಾದಿಸಿದ್ದ. ಆದರೆ ಮುಂಢೆ ಒಪ್ಪದಿದ್ದಾಗ ಪಿತ್ಥ ನೆತ್ತಿಗೇರಿದ್ದ ಆ ವ್ಯಕ್ತಿ ಅಲ್ಲಿ ನೆರೆದಿದ್ದ ಹಲವಾರು ಜನರ ಎದುರೇ ಆತನಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ಜನರು ಮಧ್ಯೆ ಪ್ರವೇಶಿಸಿ ಮುಂಢೆಯನ್ನು ರಕ್ಷಿಸಿ ಸವಾರನನ್ನು ಹಿಡಿದು ಮಾಣಿಕ್‌ಪುರ ಪೊಲೀಸರಿಗೊಪ್ಪಿಸಿದ್ದರು.

ಸವಾರನ ವಿರುದ್ಧ ಸರಕಾರಿ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ ಆರೋಪದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News