ಮಕ್ಕಳ ಸಾವಿಗೆ ಮೆದುಳುಜ್ವರ ಕಾರಣ ಎಂದ ಸೆಹ್ವಾಗ್ ಗೆ ಟ್ವಿಟ್ಟರ್ ಮಂಗಳಾರತಿ !

Update: 2017-08-12 11:40 GMT

ಹೊಸದಿಲ್ಲಿ, ಆ. 12 : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಜಿಲ್ಲೆ ಗೋರಖ್ ಪುರದ ಆಸ್ಪತ್ರೆಯೊಂದರಲ್ಲಿ 60 ಕ್ಕೂ ಹೆಚ್ಚು ಕಂದಮ್ಮಗಳು ಬಲಿಯಾಗಿರುವುದು ದೇಶಾದ್ಯಂತ ಚರ್ಚೆಗೆ , ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಟ್ವೀಟ್ ಮಾಡಿರುವ ಕ್ರಿಕೆಟಿಗ ಸೆಹ್ವಾಗ್ ನೇರವಾಗಿ ಈ ಸಾವುಗಳಿಗೆ ಮೆದುಳು ಜ್ವರ ಕಾರಣ ಎಂದು ತೀರ್ಪು ಕೊಟ್ಟಿರುವುದು ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದಾರೆ. 

ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿರುವ ಸೆಹ್ವಾಗ್ ಶನಿವಾರ ಟ್ವೀಟ್ ಮಾಡಿ, ಉತ್ತರ ಪ್ರದೇಶದಲ್ಲಿ ಹಸುಳೆಗಳ ಸಾವಿಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಈ ಸಾವುಗಳಿಗೆ ಮೆದುಳು ಜ್ವರ ಕಾರಣ. ಇದರಿಂದಾಗಿ ಈವರೆಗೆ  50000 ಮಕ್ಕಳು ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ. 

ಆದರೆ ಗೋರಖ್ ಪುರದ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ನಿಲ್ಲಿಸಿದ್ದರಿಂದಲೇ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಅಲ್ಲಿ ಜಿಲ್ಲಾಧಿಕಾರಿಯೇ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ವರದಿಯಾಗಿದೆ. ಹೀಗಿರುವಾಗ ಸೆಹ್ವಾಗ್ ಮಕ್ಕಳ ಸಾವಿನ ಹೊಣೆಯನ್ನು ಮೆದುಳು ಜ್ವರದ ಮೇಲೆ ಹಾಕಿ ಉತ್ತರ ಪ್ರದೇಶ ಸರ್ಕಾರದ ರಕ್ಷಣೆ ನಿಂತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News