ಜಿಲ್ಲೆಯ ಯುವ ಕಲಾವಿದರು ರಚಿಸಿದ ಕೇರಳ ಶೈಲಿಯ ಭಿತ್ತಿ ಚಿತ್ರಗಳ ಪ್ರದರ್ಶನ

Update: 2017-08-12 14:22 GMT

ಚಿಕ್ಕಮಗಳೂರು, ಆ.12:  ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯ ಈ ಬಾರಿ ಆ.14ರಿಂದ 24ರವರೆಗೆ10ದಿನಗಳ ಕಾಲ ಚಿತ್ರಕಲಾ ವಿದ್ಯಾರ್ಥಿಗಳಿಗೆ ಕೇರಳದ ಮ್ಯೂರಲ್ ವರ್ಣಚಿತ್ರ ರಚನಾ ಕಾರ್ಯಗಾರವನ್ನು ಶ್ರಿೀಮತಿ ಮಧುಶಿಲ್ಪನಿರ್ಧೇಶನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ತಿಳಿಸಿದ್ದಾರೆ.

ಅವರು ಶನಿವಾರ ಈ ಕುರಿತು ಹೇಳಿಕೆ ನೀಡಿದ್ದು, ಜಿಲ್ಲೆಯ 24 ಯುವ ಕಲಾವಿದರು ಭಾಗವಹಿಸಿ ಈ ಒಂದು ಶೈಲಿಯ ವೀಶೇಷತೆಗಳನ್ನು ಸಮೂಹವಾಗಿ ಅಬ್ಯಾಸ ಮಾಡಿ ಸಮೂಹವಾಗಿ ಚಿತ್ರರಚಿಸಿದ್ದಾರೆ. ಇವುಗಳಲ್ಲಿ ವಿಶೇಷವಾಗಿ ಕೃಷ್ಣ ಹಾಗೂ ರುಕ್ಮಿಣಿ, ಅನಂತ ಪದ್ಮನಾಭ, ಗಣಪತಿ, ಸರಸ್ವತಿ, ನಟರಾಜನ ದೂಡ್ಡ ಗಾತ್ರದ ಕಲಾಕೃತಿಗಳನ್ನು ವಿಕ್ಷಿಸಬಹುದಾಗಿದೆ. ಆ.14 ರಂದು ಈ ಬಿತ್ತಿ ಚಿತ್ರ ಸಾರ್ವಜನಿಕರಿಗೆ ವೀಕ್ಷಣೆಗೆ ಶಾಂತಿನಿಕೇತನ ಆರ್ಟ್ ಗ್ಯಾಲರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಉದ್ಗಾಟನೆಗೊಳ್ಳಲಿದೆ.

ಚಿತ್ರರಚನೆಗೆ ಪೂರ್ವದಲ್ಲಿ ರಚನಾ ಕ್ರಮವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.1 ಗೋಡೆಗಳನ್ನು ಚಿತ್ರರಚನೆ ಪೂರಕವಾಗುವಂತೆ ಪೆಸ್ಕೋ ಮಾಧರಿಯಲ್ಲಿ ಜಾಗವನ್ನು ಸಿದ್ದಪಡಿಸಿಕೂಳ್ಳುವುದು. 2 ರೇಖಾಚಿತ್ರ 3 ಬಣ್ಣಗಳ ಅನ್ವಯ 4 ಅಲಂಕಾರಿಕ ವಿವರಗಳನ್ನು ಸೇರಿಸುವುದು.ಕೇರಳದ ಭಿತ್ತಿಚಿತ್ರಗಳಲ್ಲಿ ಓಕರ್- ಹಳದಿ, ಬಿಳಿ, ನೀಲಿ, ಹಸಿರು ,ಶುದ್ಧ ಹಸಿರು,ಆಕಾಶ ನೀಲಿ ಕೆಂಪುಬಣ್ಣ ಪ್ರಮುಖವಾಗಿ ಕಂಡು ಬರುತ್ತದೆ. ಸಸ್ಯಜನ್ಯ ವರ್ಣಗಳು ಹಾಗೂ ಕನಿಜ ವರ್ಣದ್ರವ್ಯಗಳಿಂದ ಮತ್ತು ಕಚ್ಚಾ ರಾಸಾಯಿನಿಕಗಳಿಂದ ತಯಾರಿಲಾಗಿದೆ.

ಇವುಗಳಲ್ಲಿ ಬಿಳಿ ಬಣ್ಣವನ್ನು ಸುಣ್ಣದಿಂದ ಹೂರತೆಗೆಯಲಾಗಿದ್ದು, ಕಪ್ಪುದೀಪಗಳ ಇಂಗಾಲದ ಮಬ್ಬು, ಕೆಂಪು ಮತ್ತು ಹಳದಿ ಬಣ್ಣಗಳನ್ನು ಖನಿಜಗಳಿಂದ ತಯಾರಿಸಲಾಗುತ್ತಿತ್ತು. ನೀಲಿಬಣ್ಣವನ್ನು ಸಸ್ಯಗಳಿಂದ ಪಡೆಯಲಾಗುತ್ತಿತ್ತು. ಗಾಡವಾದ ಕೆಂಪುಬಣ್ಣವನ್ನು ತಯಾರಿಸಲು ಲ್ಯಾಕ್ ರಸವನ್ನು ಸಹ ಬಳಸಲಾಗುತ್ತಿತ್ತು. ಪೈನ್ ರಾಳ ಮತ್ತು ತೈಲ ಮಿಶ್ರಣದಿಂದ ಲ್ಯಾಕರಿಂಗ್ ಲೇಪನವನ್ನು ಮಾಡಿ ಬಿತ್ತಿಚಿತ್ರಗಳು ಯಾವುದೆ ಮಳೆ ಗಾಳಿಗೆ ಹಾಳಗದಂತೆ ಸಂರಕ್ಷಿಸುತ್ತಿದ್ದರು.

ಇವುಗಳ ರಚನೆಯಲ್ಲಿ ಬಾಹ್ಯರೇಖೆಗಳನ್ನು ಕುಂಚ ಹಾಗೂ ಕ್ರಯಾನ್ ಗಳಿಂದ ಚಿತ್ರಿಸಿರುವುದನ್ನು ಕಾಣಬಹುದು.ಆಕೃತಿಗಳಲ್ಲಿ ಐದು ಪ್ರಮುಖ ನಿಲುವನ್ನು ಸೂಚಿಸುತ್ತದೆ. ಮುಂಬಾಗ,ಅರ್ಧಮುಂಬಾಗ,ಪರಾಕಾಷ್ಠೆ ಈ ತರದಲ್ಲಿ ಚಿತ್ರಗಳ ರಚನರಯಲ್ಲಿ ವಿಭಜಿಸಿರುವುದು ಕಂಡು ಬರುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News