ಹದಗೆಟ್ಟ ಹನೂರು ಮಲೈಮಹದೇಶ್ವರ ಕ್ರೀಡಾಂಗಣ ರಸ್ತೆ

Update: 2017-08-14 06:53 GMT

ಹನೂರು, ಆ. 14: ರಸ್ತೆ ಸಂಪೂರ್ಣ ಗುಂಡಿಗಳಾಗಿ ಅವುಗಳಲ್ಲಿ ಮಳೆನೀರು ನಿಂತು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಸಂಚರಿಸಲು ಕಷ್ಟಕರವಾಗಿದೆ. ಇದು ಹನೂರು ಪಟ್ಟಣದ ಮಲೈಮಹದೇಶ್ವರ ಕ್ರೀಡಾಂಗಣದ ಪ್ರವೇಶದ್ವಾರದ ಬಳಿಯ ರಸ್ತೆಯಾಗಿದೆ.

ಹನೂರು ಪಟ್ಟಣದ ಮಲೈಮಹದೇಶ್ವರ ಕ್ರೀಡಾಂಗಣದ ಪ್ರವೇಶ ದ್ವಾರದ ಬಳಿ ರಸ್ತೆಯು ತುಂಬಾ ಹದಗೆಟ್ಟಿದ್ದು , ದೊಡ್ಡ ದೊಡ್ಡ ಗುಂಡಿಗಳಾಗಿ ಮಾರ್ಪಡಾಗಿದ್ದು, ಅವುಗಳಲ್ಲಿ ನಿಂತ ನೀರಿನಿಂದ ಯಾವುದೇ ದೂಡ್ಡ ವಾಹನ ಬಂದರೂ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ರಸ್ತೆ ಬದಿಯಲ್ಲಿ ಸರಿದು ನಿಂತು ದೊಡ್ಡ ವಾಹನಗಳು ಹೋದ ನಂತರ ಹೋಗಬೇಕಾದ ಪ್ರಸಂಗ ನಿರ್ಮಾಣವಾಗಿದೆ.

ರಾತ್ರಿ ಸಮಯದಲ್ಲಿ ಬಂದರೇ ಅಪಾಯ ತಪ್ಪಿದಲ್ಲ. ಅದ್ದಲ್ಲದೇ ಈ ರಸ್ತೆಯಲ್ಲಿ ಗುಂಡಿಗಳಾಗಿ ಮಾರ್ಪಾಡಾಗಿರುವ ಬಲ ಭಾಗದಲ್ಲಿ ರಾಮಯ್ಯನಕೆರೆಯು ಸಹ ಇದ್ದು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಮತ್ತಷ್ಟು ಅಪಾಯಕ್ಕೆ ಆತಂಕ್ಕೆ ಎಡೆ ಮಾಡಿಕೂಟ್ಟಿದೆ. ಕ್ರೀಡಾಂಗಣಕ್ಕೆ ದಿನ ನಿತ್ಯ ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಪಟ್ಟಣದ ಜನ ಸಾಮಾನ್ಯರು ವಾಯುವಿಹಾರಕ್ಕೆ ಮತ್ತು ಕ್ರೀಡಾಪಟುಗಳು, ಜನ ಸಾಮಾನ್ಯರು ಇದು ಯಾವ ಕಾಲಕ್ಕೆ ಈ ರಸ್ತೆ ಸರಿಯಾಗುತ್ತದೆ ಎಂದು ಶಾಪ ಹಾಕುತ್ತಾ ಓಡಾಡುತ್ತಿದ್ದಾರೆ. ಆದ್ದರಿಂದ ಸಬಂಧಪಟ್ಟ ಅಧಿಕಾರಿಗಳು /ಜನಪ್ರತಿನಿಧಿಗಳು ಹಾಗೂ ಇತ್ತ ಗಮನಹರಿಸಿ ಹದಗೆಟ್ಟ ರಸ್ತೆಯನ್ನು ಸರಿಪಡಿಸಿ, ಗುಂಡಿಗಳನ್ನು ಮುಚ್ಚಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು ಎಂದು ಅವರು ಒತ್ತಾಹಿಸಿದ್ದಾರೆ.

Writer - ಅಭಿಲಾಷ್ ಟಿ

contributor

Editor - ಅಭಿಲಾಷ್ ಟಿ

contributor

Similar News