ಭಾರತ-ಪಾಕ್ ಗಾಯಕರ ‘ಶಾಂತಿಯ ಗೀತೆ’ ವೈರಲ್

Update: 2017-08-14 06:58 GMT

ಹೊಸದಿಲ್ಲಿ,ಆ.14: ಭಾರತ ಪಾಕಿಸ್ತಾನದ ಎಪ್ಪತ್ತನೆ ಸ್ವಾತಂತ್ರ್ಯ ದಿನಾಚರಣೆ ವೇಳೆ ಎರಡು ದೇಶಗಳಲ್ಲಿಶಾಂತಿ ನೆಲೆಸಲು ಕೆಲವು ಗಾಯಕರು ಸೇರಿ ಹಾಡಿದ ಹಾಡು ವೈರಲ್ ಆಗುತ್ತಿದೆ. ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರಗೀತೆಗಳನ್ನು ಎರಡು ದೇಶಗಳಲ್ಲಿರುವ ಗಾಯಕರು ಹಾಡಿದ್ದು ವೈರಲ್ ಆಗಿದೆ. ಶಾಂತಿಗಾಗಿರುವ ರಾಷ್ಟ್ರಗೀತೆಯನ್ನುವಾಯ್ಸ್ ಆಫ್ ರಾಂ ಎನ್ನುವ ಫೇಸ್‌ಬುಕ್ ಪೇಜ್‌ನಲ್ಲಿಶೇರ್ ಮಾಡಲಾಗಿದೆ. ಗಡಿಯನ್ನು ಕಲೆಗಾಗಿ ತೆರೆದು ಕೊಟ್ಟರೆ ಶಾಂತಿ ಸ್ಥಾಪನೆಯಾಗಲಿದೆ ಎನ್ನುವ ಮಾತಿನೊಂದಿಗೆ ಹಾಡು ಆರಂಭವಾಗುತ್ತದೆ.

ಭಾರತದ ಜನಗಣಮನ  ಗೀತೆಯನ್ನು ಪಾಕಿಸ್ತಾನದ ಪಾಕ್ ಸರ್‌ಝಮೀನ್, ಎರಡು ದೇಶಗಳ ಗಾಯಕರು ಸೇರಿ ಹಾಡುವುದು ವೀಡಿಯೊದಲ್ಲಿದೆ. ಇದರಜೊತೆಗೆ ಶಾಂತಿಗಾಗಿ ನಾವು ಒಗ್ಗೂಡಿ ನಿಲ್ಲೋಣ ಎನ್ನುವ ಸಂದೇಶವನ್ನೂ ಅವರು ನೀಡುತ್ತಿದ್ದಾರೆ.

ಈ ಹಿಂದೆ ಪಾಕ್ ರಾಷ್ಟ್ರಗೀತೆ ಹಾಡುತ್ತಿರುವ ಭಾರತದ ತಂಡದ ವೀಡಿಯೊ ವೈರಲ್‌ಆಗಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News