ಗೋರಖ್‌ಪುರ ದುರಂತ:ಪ್ರತಿಪಕ್ಷಗಳ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ

Update: 2017-08-14 12:15 GMT

ಲಕ್ನೋ,ಆ.14: ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಮಕ್ಕಳ ಸಾವನ್ನು ಪ್ರತಿಭಟಿಸಿ ಎಸ್‌ಪಿ,ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೋಮವಾರ ಗೋರಖ್‌ಪುರ ಬಂದ್‌ಗೆ ನೀಡಿದ್ದ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಹೆಚ್ಚಿನ ಕಡೆಗಳಲ್ಲಿ ಅಂಗಡಿ-ಮುಂಗಟ್ಟುಗಳು ತೆರೆದಿದ್ದವು.

ಎಸ್‌ಪಿ ಮತ್ತು ಎಡಪಕ್ಷಗಳ ನಾಯಕರು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಜಂಟಿ ಪ್ರತಿಭಟನೆಯನ್ನು ನಡೆಸಿದರೆ ಕಾಂಗ್ರೆಸ್ ಕಾರ್ಯಕರ್ತರು ಪುರಭವನದಲ್ಲಿ ಗಾಂಧಿ ಪ್ರತಿಮೆಯ ಎದುರು ವೌನ ಪ್ರತಿಭಟನೆ ನಡೆಸಿದರು.

ಮೃತ ಮಕ್ಕಳ ಗೌರವಾರ್ಥ ಬಂದ್ ಆಚರಿಸುವಂತೆ ನಾವು ಅಂಗಡಿ-ಮುಂಗಟ್ಟುಗಳ ಮಾಲಿಕರನ್ನು ಕೋರಿದ್ದೇವೆ ಎಂದು ಎಸ್‌ಪಿಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಹ್ಲಾದ ಯಾದವ ತಿಳಿಸಿದರೆ, ಬಂದ್‌ನಿಂದ ಜನರಿಗೆ ಅನಾನುಕೂಲವಾಗುತ್ತದೆ, ಹೀಗಾಗಿ ನಾವದನ್ನು ಬೆಂಬಲಿಸುತ್ತಿಲ್ಲ. ಮೃತ ಮಕ್ಕಳಿಗೆ ಶ್ರದ್ಧಾಂಜಲಿ ಅರ್ಪಿಸಲು ವ್ಯಾಪಾರಿಗಳು ಮೋಂಬತ್ತಿ ಜಾಥಾ ನಡೆಸಲಿದ್ದಾರೆ ಎಂದು ವ್ಯಾಪಾರಿಗಳ ಸಂಘದ ನಾಯಕರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News