ಹನುರು: ಹುತಾತ್ಮರ ದಿನಾಚರಣೆ ಕಾರ್ಯಕ್ರಮ

Update: 2017-08-14 12:27 GMT

ಹನೂರು, ಆ.14: ಶ್ರೀ ಹರಿಕ್ರಿಷ್ಣ, ಐ.ಪಿ.ಎಸ್, ಶ್ರೀ ಶಕೀಲ್‌ಅಹಮದ್, ಹಾಗು 4 ಜನ ಪೋಲೀಸ್ ಅಧಿಕಾರಿಗಳು ಕಾಡುಗಳ್ಳ ವೀರಪ್ಪನ್ ವಿರುದ್ದದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿ 14.08.2017 ಕ್ಕೆ 25 ವರ್ಷತುಂಬುವ ಹಿನ್ನೆಲೆಯಲ್ಲಿ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ, ಅವರತ್ಯಾಗ, ಬಲಿದಾನ ಹಾಗು ಅವರ ಒಡನಾಡವನ್ನು ನೆನೆದು ಕಾಲೇಜು ವಿದ್ಯಾರ್ಥಿಗಳು ಸಹ ಈ ಅಧಿಕಾರಿಗಳಂತೆ ಪ್ರಾಮಾಣಿಕ ಹಾಗು ದಕ್ಷ ಗುಣಗಳನ್ನು ಬೆಳೆಸಿಕೊಳ್ಳಲು  ನಿವೃತ ಎಸಿಪಿ ಟೈಗರ್‌ ಅಶೋಕ್ ರವರು ಸಲಹೆ ನೀಡಿದರು.

ರಾಮಾಪುರ ಗ್ರಾಮದ ಜೆ.ಎಸ್.ಎಸ್.ಕಲ್ಯಾಣ ಮಂಟಪದಲ್ಲಿ ಏರ್ಪಾಡು ಮಾಡಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಟೈಗರ್‌ ಅಶೋಕ್‌ರವರು ಮಾತನ್ನಾಡುತ್ತಾ, ಯಾವುದೇ ಇಲಾಖೆ, ಅಥವಾ ಸರ್ಕಾರ ದಕ್ಷ ಅಧಿಕಾರಿಗಳ ತ್ಯಾಗ, ಬಲಿಧಾನ ನೆನೆಯದೇ ಇರುವ ಈ ಸಂದರ್ಭದಲ್ಲಿ ಇವರೆಲ್ಲರ ತ್ಯಾಗ, ಬಲಿದಾನಗಳ ಕುರಿತು ಸ್ಫೂರ್ತಿಗೊಂಡು ಯುವಕರೇ ಈ ಕಾರ್ಯಕ್ರಮ ಮಾಡುತ್ತಿರುವುದು ಒಂದು ವಿಶೇಷ. ಹಾಗು ಇತರರಿಗೆ ಸ್ಪೂರ್ತಿಎಂದು ತಿಳಿಸಿದರು. ಇನ್ನೂ 6 ಸ್ಥಳಗಳಲ್ಲಿಯೂ ವೀರಪ್ಪನ್‌ಕೈಯಲ್ಲಿ ಹತರಾದ ಸ್ಥಳಗಳಿವೆ ಅಲ್ಲಿಯೂ ಸಹ ಇದೇ ರೀತಿಯ ಸ್ಮಾರಕಗಳಾಗಬೇಕು ಹಾಗು ಅವರತ್ಯಾಗ, ಬಲಿದಾನ ಎಲ್ಲರಿಗೂ ತಿಳಿಯಬೇಕೆಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಹಾಗು ಈ ಸ್ಮಾರಕ ಮಾಡಲು ಕಾರಣಕರ್ತರಾದ ಡಿ.ವೈ.ಎಸ್.ಪಿಯಾಗಿದ್ದ ಚನ್ನಬಸವಣ್ಣನವರ್ ನವರಿಗೂ ಧನ್ಯವಾದವನ್ನು ತಿಳಿಸಿದರು.
 
ಜೆ.ಎಸ್.ಎಸ್. ಕಾಜೇಜು ಹಾಗು ಪ್ರೌಢಶಾಲೆರಾಮಾಪುರ, ವಿವೇಕಾನಂದಕಾಲೇಜಿನ ವಿದ್ಯಾರ್ಥಿಗಳು, ಕಾಲೇಜು ಸಿಬಂಧಿಗಳು, ಕರ್ನಾಟಕ ರಾಜ್ಯಕಿಶಾನ್ ಸಂಘದ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಮೈರಾಡ ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಹಾಗು ರಾಮಾಪುರಗ್ರಾಮಸ್ಥರು ಮತ್ತು ಕಾರ್ಯಕ್ರಮ ಏರ್ಪಡಿಸಿದ ಯುವಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News