ಮೂಡಿಗೆರೆ : ಎಸ್‍ಕೆಎಸ್‍ಎಸ್‍ಎಫ್‍ನಿಂದ 71ನೆ ಸ್ವಾತಂತ್ರ್ಯ ದಿನಾಚರಣೆ

Update: 2017-08-16 11:16 GMT

ಮೂಡಿಗೆರೆ, ಆ.16: ಭಯೋತ್ಪಾಧನೆ, ಕೋಮುವಾದ, ಭ್ರಷ್ಟಾಚಾರದಿಂದ ಇಂದು ದೇಶದ ಜನತೆ ಕಂಗೆಡುವಂತಾಗಿದೆ. ಆಳುವ ವರ್ಗ ಶೋಷಿತರ ಪರವಾಗಿ ನಿಲ್ಲದಿದ್ದರೆ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರನ್ನು ಕಡೆಗಣಿಸಿದಂತಾಗುತ್ತದೆ ಎಂದು ಮಂಗಳೂರು ಜಿಲ್ಲೆಯ ಬಿ.ಸಿ.ರೋಡ್‍ನ ಧಾರ್ಮಿಕ ವಿದ್ವಾಂಸ ಶುಕೂರ್ ದಾರಿಮಿ ಹೇಳಿದರು.

ಅವರು ಮಂಗಳವಾರ ಪಟ್ಟಣದ ಲಯನ್ಸ್ ವೃತ್ತದಲ್ಲಿ ತಾಲೂಕು ಎಸ್‍ಕೆಎಸ್‍ಎಸ್‍ಎಫ್ ಹಮಿಕೊಂಡಿದ್ದ 71ನೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫ್ರೀಡಂ ಸ್ಕ್ವೇರ್ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ದಒರೆತು 70 ವರ್ಷಗಳು ಸಂದರೂ 70 ಕೋಟಿ ಮಂದಿ ಬಡತನದಿಂದ ಮುಕ್ತವಾಗಲಿಲ್ಲ. 40 ಕೋಟಿ ಮಂದಿ ಮಧ್ಯಮ ವರ್ಗದವರಾದರೆ, ಉಳಿದ 20 ಕೋಟಿ ಮಂದಿ ಶ್ರೀಮಮತರಿದ್ದಾರೆ. ಆದರೂ ಇಂದು ನಮ್ಮನ್ನು ಆಳುತ್ತಿರುವ ಮಂದಿ ಬಹುಸಂಕ್ಯಾತ ಬಡವರನ್ನು ತುಳಿತಕ್ಕೆ ಒಳಪಡಿಸುತ್ತಿದ್ದಾರೆ ಎಂದರು.

  ಎಂ.ಎಲ್.ಸಿ. ಡಾ. ಮೊಟಮ್ಮ ಮಾತನಾಡಿ, ಭಾರತದಲ್ಲಿ ಹುಟ್ಟಿದ ಎಲ್ಲಾ ಧರ್ಮಗಳು ದೇಶದ ಸೊತ್ತು. ಇವುಗಳನ್ನು ಬಳಸಿ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯಬೇಕು. ದುಷ್ಟ ಶಕ್ತಿಗಳನ್ನು ದೇಶದಿಂದ ಅಟ್ಟಬೇಕು. ಆಗ ಮಾತ್ರ ಭಾರತೀಯರಾಗಿ, ಸಹೋದತ್ವದ ಮೂಲಕ ಬದುಕಬಹುದು ಎಂದು ನುಡಿದರು.

  ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಭ್ರಷ್ಟಚಾರ ಮತ್ತು ನಿರುದ್ಯೋಗದಿಮದ ಕಂಗೆಟ್ಟ ಯುವಕರನ್ನು ರಾಷ್ಟ್ರ ವಿರೋಧಿಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ನಿರುದ್ಯೋಗಿ ಯುವಕರಿಗೆ ಆಳುವ ಸರ್ಕಾರಗಳು ಉಧ್ಯೋಗ ನೀಡಿ ದೆಸ ವಿರೋಧಿ ಕೃತ್ಯಗಳಿಗೆ ಕೈಜೊಡಿಸದಂತೆ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.

  ಕಾರ್ಯಕ್ರಮದಲ್ಲಿ ಎಸ್‍ಕೆಎಸ್‍ಎಸ್‍ಎಫ್ ತಾಲೂಕು ಅಧ್ಯಕ್ಷ ಸಿರಾಜುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಜಿಲ್ಲಾ ಪ.ಜಾತಿ ಅಧ್ಯಕ್ಷ ಎಂ.ಸಿ.ಹೂವಪ್ಪ, ಬಿಎಸ್‍ಪಿ ಮುಖಂಡ ಮರಗುಂದ ಪ್ರಸನ್ನ, ಪೀಸ್ ಅಂಡ್ ಅವರ್‍ನೆಸ್ ಟ್ರಸ್ಟ್‍ನ ಸಂಸ್ತಾಪಕ ಅಲ್ತಾಫ್ ಬಿಳಗುಳ, ಅಕ್ರಮ ಹಾಜಿ, ಎ.ಸಿ.ಅಯ್ಯೂಬ್ ಹಾಜಿ ಮಾತನಾಡಿದರು. ಪ್ರಾರಂಭದಲ್ಲಿ ರಾಷ್ಟ್ರಧ್ವಜಾರೋಹಣದೊಂದಿಗೆ ಬದ್ರಿಯಾ ಮಸೀದಿ ಆವರಣದಿಂದ ಲಯನ್ಸ್ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು.

  ವೇದಿಕೆಯಲ್ಲಿ ಎಸ್‍ಕೆಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ಸಿ.ಕೆ.ಇಬ್ರಾಹೀಮ, ಅಬ್ದುಲ್ಲಾ ಹಾಜಿ, ಜಿಪಂ ಸದಸ್ಯ ನಿಖಿಲ್ ಚಕ್ರವತಿ, ಕರ್ನಾಟಕ ಬ್ಯಾರೀ ಸಾಹಿತ್ಯ ಅಕಾಡಮಿ ಸದಸ್ಯ ಕಿರುಗುಂದ ಅಬ್ಬಾಸ್, ಬದ್ರಿಯಾ ಮಸೀದಿ ಖತೀಬ್ ಯಾಕೂಬ್ ಧಾರಿಮಿ, ಬದ್ರುದ್ದೀನ್ ಬಿಳಗುಳ, ಅಬೂಬಕ್ಕರ್, ಶಿರಾಜುದ್ದೀನ್ ಮುಸ್ಲಿಯಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News