ಕುಡಿಯುವ ನೀರಿನ ಬೋರ್‍ವೇಲ್‍ ಕಾಮಗಾರಿಗೆ ಚಾಲನೆ

Update: 2017-08-16 11:58 GMT

ಹನೂರು,ಆ.16 : ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ  ಶುದ್ದ ನೀರು ಘಟಕದ ಮುಂಖಾತರ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಪಟ್ಟಣ ಪಂಚಾಯತ್ ಅದ್ಯಕ್ಷೆಯಾದ ಮಮತ ಮಹದೇವ್ ತಿಳಿಸಿದರು.

ಹನೂರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ಬೋರ್‍ವೇಲ್‍ಗೆ ಕಾಮಗಾರಿ ನೇರವೇರಿಸಿ ಮಾತನಾಡಿದ ಅಧ್ಯಕ್ಷರು ಪಟ್ಟಣಕ್ಕೆ ದಿನ ನಿತ್ಯ ತಮ್ಮ ವ್ಯಾಪಾರ ಚಟುವಟಿಕೆಗೆ ಹಾಗೂ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ದೂರದ ಗ್ರಾಮಗಳಿಂದ ಕೇಂದ್ರ ಸ್ಥಾನವಾಗಿರುವ ಹನೂರು ಪಟ್ಟಣಕ್ಕೆ ಆಗಮಿಸುತ್ತಿದ್ದರು ಮತ್ತು ಸರ್ಕಾರಿ ಶಾಲೆಯÉಲ್ಲೂ ಮಕ್ಕಳಿಗೆ ಕುಡಿಯಲು ಮತ್ತು ದಿನ ನಿತ್ಯದ ಬಳಕೆಗೆ ಆಹಾಕಾರ ಉಂಟಾಗಿತ್ತು,  ಈ ನಿಟ್ಟಿನಲ್ಲಿ ಕಳೆದ ವಾರ ಸುಮಾರು 10 ಲಕ್ಷ ರೂ. ವೆಚ್ದದ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿಗೆ ಶಾಸಕ ಆರ್ ನರೇಂದ್ರರಾಜೂಗೌಡ ಭೂಮಿ ಪೊಜೆ ನೆರೆವೇರಿಸಿದ್ದರು, ಇಂದು  ಕಾರ್ಯ ರೂಪಕ್ಕೆ ಬಂದ್ದಿದೆ ಎಂದರು.

ಈ ಸಂದರ್ಭದಲ್ಲಿ ಹನೂರು ಪಟ್ಟಣ ಪಂಚಾಯತಿಯ ಉಪಾದ್ಯಕ್ಷರಾದ ಬಸವರಾಜು ಬಿ ಆರ್ ಪಿ ಆಶೋಕ್‍, ಶಿಕ್ಷಕರಾದ ಚಿನ್ನರಾಜು ಮುಂಖಡರಾದ  ಗಿರೀಶ್ ಲಿಂಗರಾಜು ಮಹದೇವ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News