ತಾಪಂ ಅಧ್ಯಕ್ಷ ಕೆ.ಸಿ.ರತನ್ ಅಧ್ಯಕ್ಷತೆಯಲ್ಲಿ ಮಾಸಿಕ ಕೆಡಿಪಿ ಸಭೆ

Update: 2017-08-16 12:31 GMT

ಮೂಡಿಗೆರೆ, ಆ.16:) ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಮನ ಬಂದಂತೆ ಕೆಲಸ ಮಾಡಿದರೆ ತಾನು ಸುಮ್ಮನಿರೋದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

  ಅವರು ಬುಧವಾರ ತಾಪಂ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. 94ಸಿಯಲ್ಲಿ ಫಲಾನುಭವಿಗಳು ಹಾಕಿರುವ ಅರ್ಜಿಯನ್ನು ಯಾವ ಕಾರಣಕ್ಕಾಗಿ ತಿರಸ್ಕಾರ ಮಾಡಲಾಗುತ್ತದೆ ಎಂದು ಇಲಾಖೆಯ ನೋಟೀಸು ಬೋರ್ಡ್‍ನಲ್ಲಿ ಹಾಕಬೇಕು. ತಿರಸ್ಕøತಗೊಂಡ ಅರ್ಜಿಯ ಫಲಾನುಭವಿಗಳನ್ನು ಯಾಮಾರಿಸಿ ಕೆಲಸ ಮಾಡಿಕೊಡುತ್ತೇವೆಂದು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತದೆ. ಇದು ಇಲ್ಲಿಗೆ ನಿಲ್ಲಿಸಬೇಕು.

  ಯಾವುದೇ ಪಕ್ಷದ ಜನಪ್ರತಿನಿಧಿಗಳನ್ನು ಇಲಾಖಾ ಕಾರ್ಯಕ್ರಮಗಳಿಗೆ ಆಹ್ವಾನ ಮಾಡುವಾಗ ಫ್ರೋಟೊಕಾಲ್‍ನಂತೆ ಮಾಡಬೇಕು. ಯಾರನ್ನೋ ಖುಷಿಪಡಿಸಲು ಮನ ಬಂದಂತೆ ಕೆಲಸ ಮಾಡಿದರೆ ತಾನು ಸುಮ್ಮನಿರೋದಿಲ್ಲ. ಇಂತಹ ಬೆಳವಣಿಗೆ ಪುನಃ ಮರುಕಳಿಸಿದರೆ ನಿಮ್ಮ ಮೇಲೆ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

 ಅಧ್ಯಕ್ಷತೆ ವಹಿಸಿ ತಾಪಂ ಅಧ್ಯಕ್ಷ ಕೆ.ಸಿ.ರತನ್ ಮಾಡನಾಡಿ, ಆರೋಗ್ಯ ಇಲಾಖೆ ಕಚೇರಿಯೊಳಗೆ ಚಿಲಕ ಹಾಕಿ ಕುಳಿತುಕೊಳ್ಳುವ ಅವಶ್ಯಕತೆ ಏನಿದೆ? ಇಲಾಖೆಯಲ್ಲಿ ಬೆಳಗ್ಗೆ 9 ರಿಂದ ಸಂಚೆ 6 ಗಂಟೆವರೆಗೆ ತೆರೆದಿರಬೇಕು. ತಿಂಗಳಲ್ಲಿ ಕನಿಷ್ಟ 15 ಆಸ್ಪತ್ರೆಗಳಿಗೆ ಭೇಟಿ ನೀಡಬೇಕು ಎಂದು ಆರೋಗ್ಯಾಧಿಕಾರಿ ಡಾ.ಸುಂದರೇಶ್‍ಗೆ ಸೂಚಿಸಿದರು.

 ಸಂಸದರ ಅನುದಾನ ಉಳಿದಿದ್ದರೆ ಅದನ್ನು ಪೂರ್ಣಗೊಳಿಸುವವರೆಗೂ ಬೇರೆ ಅನುದಾನ ನೀಡುವುದಿಲ್ಲ. ಉಳಿಸಿಕೊಂಡಿರುವ ಸಂಸದರ ಅನುದಾನ ಬಳಸಿಕೊಂಡು ಶೀಘ್ರವೇ ಕೆಲಸ ಮುಗಿಸಬೇಕು. ಶಿಕ್ಷಣ ಇಲಾಖೆಯಲ್ಲಿ ಕಳೆದ ತಿಂಗಳಿಂದ ಆಡಳಿತ ವ್ಯವಸ್ಥೆ ಬಿಗಿಯಾಗಿದ್ದು, ಕೇವಲ ಒಂದೇ ತಿಂಗಳಿಗೆ ಸೀಮಿತಗೊಳಿಸದೆ ಪ್ರತಿ ತಿಂಗಳು ಮುಂದುವರೆಸಬೇಕು.

  ಕೇಂದ್ರ ಸರಕಾರದ ದೀನ್ ದಯಾಳ್ ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ ಅರ್ಹ ಫಲಾನುಭವಿಗಳ ಪಟ್ಟಿ ಬಿಟ್ಟು ಹೋದರೆ ಆಯಾ ಗ್ರಾಪಂ ಪಿಡಿಓಗಳು ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಸಣ್ಣ ನೀರಾವರಿ ಇಲಾಖೆ, ಲ್ಯಾಂಡ್ ಆರ್ಮಿ, ರೇಷ್ಮೆ ಇಲಾಖೆ, ನಿರ್ಮಿತಿ ಕೇಂದ್ರದ ಅಕಾರಿಗಳು ಸಭೆಗೆ ಗೈರಾಗಿದ್ದರಿಂದ ಅವರ ವಿರುದ್ದ ಕ್ರಮ ಕೈಗೊಳ್ಳಲು ನಿರ್ಣಯಿಸಲು ತಿಳಿಸಿದರು.

  ತಾಪಂ ಉಪಾಧ್ಯಕ್ಷೆ ಸವಿತ ರಮೇಶ್ ಮಾತನಾಡಿ, ಬಹುತೇಕ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗಳಿಗೆ ಹೋಗಲು ಸಾಧ್ಯವಾಗದಿದ್ದರೆ ಬೇರೆ ಅಧಿಕಾರಿಗಳನ್ನು ಕಳಿಸುವಾಗ ಸಂಪೂರ್ಣ ಮಾಹಿತಿ ಇರುವಂತವರನ್ನು ಕಳುಹಿಸಬೇಕು. ಇಲ್ಲವಾದರೆ ಗ್ರಾಮಸಭೆ ನಡೆಸುವುದರಿಂದ ಪ್ರಯೋಜನವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಬಾರದೆಂದು ತಿಳಿಸಿದರು.

ಸಭೆಯಲ್ಲಿ ತಾಪಂ ಇಓ ಗುರುದತ್ ಸೇರಿದಂತೆ ವಿವಿಧ ಇಲಾಖೆ ಅಕಾರಿಗಳು ಭಾಗವಹಿಸಿದ್ದರು.

‘ಶವ ಪರೀಕ್ಷೆ ಮಾಡಲು ತಾರತಮ್ಯ ಮಾಡಬೇಡಿ. ಕರ್ತವ್ಯ ನಿಯೋಜನೆಯಲ್ಲಿದ್ದವರೆ ಕೂಡಲೆ ನೆರವೇರಿಸಲು ತಿಳಿಸಬೇಕು. ಜನರಿಕ್ ಮೆಡಿಕಲ್ ಅಂಗಡಿಯನ್ನು ದಿನದಲ್ಲಿ 24 ಗಂಟೆಯೂ ತೆರೆಯುವಂತೆ ಎಂಎಸ್‍ಐಎಲ್‍ಗೆ ನಿರ್ದೇಶನ ನೀಡಬೇಕು. ವೈದ್ಯರಿಗೆ ಬಯೋಮೆಟ್ರಿಕ್ ಶೀಘ್ರವಾಗಿ ಅಳವಡಿಕೆ ಮಾಡಬೇಕು. ಹೊಸ ವೈದ್ಯರ ಕುಂದುಕೊರತೆಯನ್ನು ಆಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು’

- ಕೆ.ಸಿ.ರತನ್, ಅಧ್ಯಕ್ಷರು, ತಾಪಂ, ಮೂಡಿಗೆರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News