ಚಿಣ್ಣರ ಜಗತ್ತು-ಸ್ವೀಟ್ ಡ್ರೀಮ್ ಕಾರ್ಯಕ್ರಮ

Update: 2017-08-16 12:07 GMT

ಚಿಕ್ಕಮಗಳೂರು, ಆ.16: ಅಲ್ ಬದ್ರಿಯಾ ನೂರುಲ್ ಇಸ್ಲಾಂ ಹೈಯರ್ ಸೆಕೆಂದರಿ ಮದರಸ ವಿಜಯಪುರ ಇಲ್ಲಿನ ವಿದ್ಯಾರ್ಥಿ ಸಂಘಟನೆಯಾದ ಸುನ್ನೀ ಬಾಲ ಸಂಘ(ಎಸ್‍ಬಿಎಸ್) ವತಿಯಿಂದ ವಿದ್ಯಾರ್ಥಿಗಳಿಗೆ ಸ್ವೀಟ್ ಡ್ರೀಮ್-ಚಿಣ್ಣರ ಜಗತ್ತು-ಸ್ಪೂರ್ತಿದಾಯಕ ತರಗತಿಯನ್ನು ನಡೆಯಿತು.

  ಎಸ್.ಎಸ್.ಎಫ್ ಅಖಿಲ ಭಾರತ ಪ್ರ.ಕಾರ್ಯದರ್ಶಿ ಕೆ.ಎಂ. ಅಬೂಬಕ್ಕರ್ ಸಿದ್ದೀಖ್ ರವರು ತರಗತಿ ನಡೆಸಿಕೊಟ್ಟರು. ಮದರಸದ ಮುಖ್ಯೋಪಧ್ಯಾಯ ಇಬ್ರಾಹಿಂ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೌಲಾನಾ ಹುಸೈನ್ ಸಅದಿ ಹೊಸ್ಮಾರ್ ಆಶಂಸ ಭಾಷಣ ನರವೇರಿಸಿದರು. ಮಕ್ಕಳಲ್ಲಿ ನವಚೈತನೈವನ್ನುಂಟು ಮಾಡಲು ಪ್ರಸ್ತುತ ತರಗತಿ ಕಾರಣವಾಯಿತು.

ಕಾರ್ಯಕ್ರಮದಲ್ಲಿ ಮದರಸದ ಎಲ್ಲಾ ಉಸ್ತಾದರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News