ಶಿವಮೊಗ್ಗ : ಸರ್ಜಿ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2017-08-16 12:39 GMT

ಶಿವಮೊಗ್ಗ, ಆ. 16: ನಗರದ ಸರ್ಜಿ ಆಸ್ಪತ್ರೆಯಲ್ಲಿ 71 ನೇ ಸ್ವಾತಂತ್ರೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ ರೌಂಡ್ ಟೇಬಲ್ 166 ಮತ್ತು 266 ಸಂಸ್ಥೆಯು, ವಿಶೇಷ ಚೇತನ ಮಕ್ಕಳಿಗೆ 3.40 ಲಕ್ಷ ರೂ. ಮೌಲ್ಯದ ಶ್ರವಣ ದೋಷ ಪರೀಕ್ಷಾ ಯಂತ್ರವನ್ನು ಕೊಡುಗೆಯಾಗಿ ನೀಡುವ ಮೂಲಕ ಅರ್ಥಪೂರ್ಣವಾಗಿ ಸ್ವಾತಂತ್ರೋತ್ಸವವನ್ನು ಆಚರಿಸಿತು.

ಸಂಸ್ಥೆಯ ಪ್ರಮುಖರಾದ ವಿನಯ್ ಹಾಗೂ ವರುಣ್‍ರವರು ಖ್ಯಾತ ವೈದ್ಯರಾದ ಡಾ. ಧನಂಜಯ ಸರ್ಜಿ ಮತ್ತು ಡಾ. ಕುಲಕರ್ಣಿಯವರಿಗೆ ಶ್ರವಣ ದೋಷ ಪರೀಕ್ಷಾ ಯಂತ್ರವನ್ನು ಹಸ್ತಾಂತರಿಸಿತು.

ನಂತರ ಖ್ಯಾತ ವೈದ್ಯ ಡಾ. ಧನಂಜಯ ಸರ್ಜಿಯವರು ಮಾತನಾಡಿ, ಶ್ರವಣ ದೋಷ ಪತ್ತೆಗಾಗಿ ಯಂತ್ರ ಕೊಡುಗೆಯಾಗಿ ನೀಡಿದ ಸಂಸ್ಥೆಯ ಕ್ರಮವನ್ನು ಶ್ಲಾಘಿಸಿದರು. ನಿಜಕ್ಕೂ ಇದೊಂದು ಉತ್ತಮ ಕಾರ್ಯವಾಗಿದ್ದು, ಈ ರೀತಿಯ ಸಮಾಜಮುಖಿ ಕೆಲಸಗಳನ್ನು ಪ್ರತಿಯೊಂದು ಸಂಸ್ಥೆಯೂ ಮಾಡಬೇಕಾಗಿದೆ. ಇದರಿಂದ ಅಶಕ್ತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಸೇವೆ ಮಾಡುವ ಕೈಗಳು ಮುಂದಾದರೆ, ಸಹಾಯ ಮಾಡುವ ಕೈಗಳು ಮುಂದೆ ಬರುತ್ತವೆ ಎನ್ನುವುದಕ್ಕೆ ರೌಂಡ್ ಟೇಬಲ್ ಸಂಸ್ಥೆಯ ಕೊಡುಗೆ ಸಾಕ್ಷಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ಡಾ. ಧನಂಜಯ ಸರ್ಜಿ ತಿಳಿಸಿದರು.

ಸಂಸ್ಥೆಯ ಪ್ರಮುಖರಾದ ವಿನಯ್ ಹಾಗೂ ವರುಣ್‍ರವರು ಮಾತನಾಡಿ, ಸಮಾಜಮುಖಿ ಕಾರ್ಯಗಳಿಗೆ ಸಂಸ್ಥೆಯೂ ಸದಾ ಕಟಿ ಬದ್ದವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿ ಪುರುಷೋತ್ತಮ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News