2015ರಲ್ಲಿ ಭಾರತದಲ್ಲಿ ಪ್ರತಿ ನಿಮಿಷಕ್ಕೆ 5 ವರ್ಷಕ್ಕಿಂತ ಕೆಳಗಿನ ಇಬ್ಬರು ಮಕ್ಕಳು ಸಾವು

Update: 2017-08-16 15:52 GMT

ಹೊಸದಿಲ್ಲಿ, ಆ. 16: 2015ರಲ್ಲಿ 5 ವರ್ಷಕ್ಕಿಂತ ಕೆಳಗಿನ ಸುಮಾರು 1.08 ದಶಲಕ್ಷ ಭಾರತೀಯ ಮಕ್ಕಳು ಮೃತಪಟ್ಟಿದ್ದಾರೆ. ಪ್ರತಿ ದಿನ 2,959 ಮಕ್ಕಳು ಅಥವಾ ಪ್ರತಿ ನಿಮಿಷಕ್ಕೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ದುರಾದೃಷ್ಟವೆಂದರೆ ಇದರಲ್ಲಿ ಹೆಚ್ಚಿನ ಮಕ್ಕಳ ಸಾವು ಸಂಭವಿಸಿರುವುದು ತಡೆಯಬಹುದಾದ ಹಾಗೂ ಚಿಕಿತ್ಸೆ ನೀಡಬಹುದಾದ ರೋಗಗಳಿಂದ.ಒಂದು ನಿರ್ದಿಷ್ಟ ವರ್ಷದಲ್ಲಿ ಜನಿಸುವ ಶಿಶು ಐದು ವರ್ಷ ಆಗುವ ಮುನ್ನವೇ ಸಾವನ್ನಪ್ಪುತ್ತದೆ. ಇದರಂತೆ 2015ರಲ್ಲಿ 1,000 ಸಜೀವ ಜನನಕ್ಕೆ 43 ಸಾವು ಸಂಭವಿಸಿದೆ ಎಂದು ಮಾದರಿ ನೋಂದಣಿ ವ್ಯವಸ್ಥೆ ಅಂಕಿ-ಅಂಶ ವರದಿ 2015ರ ಇತ್ತೀಚೆಗಿನ ಅಂಕಿ-ಅಂಶ ತಿಳಿಸಿದೆ.

ಶಿಶು ಮರಣ ಪ್ರಮಾಣ ದೇಶದ ಸ್ಥಿತಿ ಹಾಗೂ ಭವಿಷ್ಯದ ಆರೋಗ್ಯವನ್ನು ಸೂಚಿಸುತ್ತದೆ. ಯಾಕೆಂದರೆ, ಶಿಶು ಮರಣ ಪ್ರಮಾಣ ಜನಸಂಖ್ಯೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 2015-16ರಲ್ಲಿ ಭಾರತದ ಆರ್ಥಿಕತೆಯ ಪ್ರಗತಿ ಕಳೆದ 5 ವರ್ಷಗಳ ಬೆಳವಣಿಗೆ ಪ್ರಮಾಣದಲ್ಲೇ ಅತ್ಯುತ್ತಮ ಅಂದರೆ ಶೇ. 7.6ಕ್ಕೆ ಏರಿತ್ತು. ಆದರೆ, 2015ರಲ್ಲಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳ ಮರಣ ಪ್ರಮಾಣ 43 ಆಗಿದ್ದು, ಇದು ಬ್ರಿಕ್ಸ್ ದೇಶಗಳಲ್ಲಿ ಅತೀ ಹೆಚ್ಚಾಗಿತ್ತು ಹಾಗೂ ದಕ್ಷಿಣ ಏಶ್ಯದಲ್ಲಿ ಮೂರನೇ ಸ್ಥಾನ ಪಡೆದಿತ್ತು. ಭಾರತದ ಕೆಲವು ರಾಜ್ಯಗಳಾದ ಅಸ್ಸಾಂ, ಮಧ್ಯಪ್ರದೇಶದಲ್ಲಿ 5 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳ ಮರಣ ಪ್ರಮಾಣ ಆಫ್ರಿಕಾದ ಘಾನಕ್ಕಿಂತಲೂ ಕೆಳ ಮಟ್ಟದಲ್ಲಿದೆ.

ಶಿಶು ಸಂದರ್ಭದ ಸಮಸ್ಯೆಗಳಿಂದ ಶೇ. 53, ನ್ಯುಮೋನಿಯಾದಿಂದ ಶೇ. 15, ಅತಿಸಾರದಿಂದ ಶೇ. 12, ದಡಾರದಿಂದ ಶೇ. 3 ಹಾಗೂ ಗಾಯಗಳಿಂದ ಶೇ. 3 ಐದು ವರ್ಷದ ಒಳಗಿನ ಮಕ್ಕಳು ಸಾವನಪ್ಪಿದ್ದಾರೆ ಎಂದು ಜಾಗತಿಕ ಆರೋಗ್ಯ ಸಂಘಟನೆಯ 2012ರ ಅಂಕಿ-ಅಂಶ ಆಧರಿಸಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣದ ವಾರ್ಷಿಕ ವರದಿ 2016-17 ಹೇಳಿದೆ. ಮೂರನೇ ಒಂದಕ್ಕಿಂತಲೂ ಹೆಚ್ಚು ಶಿಶುಗಳು ಮೊದಲ ತಿಂಗಳಲ್ಲೇ ಸಾವನ್ನಪ್ಪುತ್ತವೆ. ಇದರಲ್ಲಿ ಶೇ. 90ರಷ್ಟು ಮಕ್ಕಳ ಸಾವು ಸಂಭವಿಸುವುದು ತಡೆಗಟ್ಟಬಹುದಾದ ರೋಗಗಳಾದ ನ್ಯುಮೋನಿಯಾ ಹಾಗೂ ಅತಿಸಾರದಿಂದ ಎಂದು ಸೇವ್ದ ಚಿಲ್ಡ್ರನ್ ಸಂಸ್ಥೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News