ಬ್ರಿಟನ್: ರಾತ್ರೋರಾತ್ರಿ ಹೀರೊ ಆದ ಭಾರತ ಮೂಲದ ಬಾಲಕ

Update: 2017-08-17 03:52 GMT

ಲಂಡನ್, ಆ.17: ಭಾರತದ ಮೂಲದ 12 ವರ್ಷ ವಯಸ್ಸಿನ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದಾನೆ.

ಚಾನಲ್ 4 ಪ್ರಸಾರ ಮಾಡುವ ಚೈಲ್ಡ್ ಜೀನಿಯಸ್ ಕಾರ್ಯಕ್ರಮದಲ್ಲಿ ರಾಹುಲ್ ಎಂಬ ಪುಟ್ಟ ಬಾಲಕ ಮೊದಲ ಸುತ್ತಿನಲ್ಲಿ ಎಲ್ಲ 14 ಪ್ರಶ್ನೆಗಳಿಗೂ ಸರಿ ಉತ್ತರ ನೀಡಿ ಗಮನ ಸೆಳೆದಿದ್ದಾನೆ. 162 ಐಕ್ಯೂ ಹೊಂದಿರುವ ಈ ಬಾಲಕ, ಅಲ್ಬರ್ಟ್ ಐನ್‌ಸ್ಟೀನ್ ಹಾಗೂ ಸ್ಟೀಫನ್ ಹಾಕಿಂಗ್ಸ್‌ಗಿಂತಲೂ ಅಧಿಕ ಐಕ್ಯೂ ಹೊಂದಿದ್ದಾನೆ ಎಂದು ಹೇಳಲಾಗಿದೆ. ಈ ಮೂಲಕ ಬಾಲಕ ವಿಶ್ವದ ಅತ್ಯಧಿಕ ಐಕ್ಯೂ ಹೊಂದಿದ ವ್ಯಕ್ತಿಗಳ ಸಾಲಿಗೆ ಸೇರಿದ್ದಾನೆ. ಆದರೆ ಈತನ ಐಕ್ಯೂ ಪ್ರಮಾಣವನ್ನು ನಿಖರವಾಗಿ ಯಾವ ವಿಜ್ಞಾನಿಗಳೂ ಅಳೆದಿಲ್ಲ. ಇದು ಅಂದಾಜು ಐಕ್ಯೂ ಆಗಿದೆ.

ಈ ಕಾರ್ಯಕ್ರಮದಲ್ಲಿ 12 ವರ್ಷ ವಯಸ್ಸಿನ 20 ಮಕ್ಕಳ ಪೈಕಿ ವಾರಕ್ಕೆ ಒಬ್ಬ ಬಾಲಕನನ್ನು ಆಯ್ಕೆ ಮಾಡಲಾಗುತ್ತದೆ. ಸ್ಪೆಲ್ಲಿಂಗ್ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ ರಾಹುಲ್ ಕಠಿಣ ಶಬ್ದಗಳನ್ನು ಕೂಡಾ ಸಮರ್ಪಕವಾಗಿ ಉಚ್ಚರಿಸಿದ್ದ. ಟೈಮ್ಡ್ ಮೆಮೊರಿ ಸುತ್ತಿನಲ್ಲಿ 15 ಪ್ರಶ್ನೆಗಳ ಪೈಕಿ 14ಕ್ಕೆ ಸರಿ ಉತ್ತರ ನೀಡಿದ್ದ. ಆದರೆ ಅಂತಿಮ ಪ್ರಶ್ನೆಗೆ ಉತ್ತರಿಸಲು ಸಮಯಾವಕಾಶ ಇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News