ಶಶಿಕಲಾ ಜೈಲಿನಿಂದ ಹೊರಹೋಗಿದ್ದರು: ಎಸಿಬಿಗೆ ಡಿ. ರೂಪಾ ಸಲ್ಲಿಸಿದ ವರದಿಯಲ್ಲಿ ಬಹಿರಂಗ

Update: 2017-08-21 05:57 GMT

ಬೆಂಗಳೂರು, ಆ.21: ಅಕ್ರಮ ಆಸ್ತಿ ಸಂಪಾದನೆಯ  ಆರೋಪದಲ್ಲಿ ಪರಪ್ಪನ  ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಜೈಲ್ ನಿಂದ ಹೊರಹೋಗಿ ಬರುತ್ತಿದ್ದರು ಎನ್ನುವ ವಿಚಾರ ಡಿ. ರೂಪಾ ಅವರು ಎಸಿಬಿಗೆ ಸಲ್ಲಿಸಿರುವ ವರದಿಯಲ್ಲಿ ಬಹಿರಂಗಗೊಂಡಿದೆ

ಜೈಲಿನಲ್ಲಿರುವ ಶಶಿಕಲಾ ಮತ್ತು ಅವರ ಸಂಬಂಧಿ ಇಳವರಸಿ ಸಾಮಾನ್ಯ ಕೈದಿಯಂತೆ ಜೈಲಿನಿಂದ ಹೊರಹೋಗಿ ಬ್ಯಾಗ್ ಹಿಡಿದುಕೊಂಡು  ಒಳಬರುತ್ತಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಮಹತ್ವದ ದಾಖಲೆಯನ್ನು ರಸ್ತೆ ಮತ್ತು ಸಂಚಾರ ಸುರಕ್ಷತಾ ವಿಭಾಗದ ಆಯುಕ್ತೆ ಡಿ ರೂಪಾ ಅವರು ಎಸಿಬಿಗೆ ಸಲ್ಲಿಸಿದ್ದಾರೆ.

ಜುಲೈ 31ರಂದು ಡಿ. ರೂಪಾ ಅವರು ಎಸಿಬಿ ಮುಂದೆ ಹಾಜರಾಗಿದ್ದ ವೇಳೆ ಅವರಿಗೆ  ಎಸಿಬಿ  ಪ್ರಶ್ನಾವಳಿಯೊಂದನ್ನು ನೀಡಿತ್ತು. ಪ್ರಶ್ನಾವಳಿಗೆ ಲಿಖಿತ ಉತ್ತರ ನೀಡಿರುವ ರೂಪಾ ಅವರು ಶಶಿಕಲಾಗೆ  ಜೈಲಿನಲ್ಲಿ  ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿತ್ತು   ಎಂಬ ಆರೋಪಕ್ಕೆ ಸಂಬಂಧಿಸಿ ಸಿಸಿಟಿವಿ ದೃಶ್ಯಾವಳಿಯ ದಾಖಲೆಯೊಂದಿಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಶಶಿಕಲಾ ಮತ್ತು ಇಳವರಸಿ ಜೈಲಿನಲ್ಲಿ ಈ ಮೊದಲು ಯಾವ ರೀತಿ ಓಡಾಡಿಕೊಂಡಿದ್ದರು ಎನ್ನುವುದರ ಬಗ್ಗೆ ಸಿಸಿಟಿವಿ ದಾಖಲೆಯನ್ನು ಎಸಿಬಿಗೆ ಹಿಂದಿನ ಕಾರಾಗೃಹ  ಇಲಾಖೆಯ ಡಿಐಜಿ ಡಿ ರೂಪಾ ಸಲ್ಲಿಸಿದ್ದಾರೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News