ಕೇರಳದಲ್ಲಿ ಸದಸ್ಯರ ಸಂಖ್ಯೆ ಒಂಬತ್ತು ಲಕ್ಷಕ್ಕೇರಿಸಲು ಆರೆಸ್ಸೆಸ್ ಚಿಂತನೆ

Update: 2017-08-21 09:01 GMT

ಹೊಸದಿಲ್ಲಿ,ಆ.21: ಕೇರಳದಲ್ಲಿ ಆರೆಸ್ಸೆಸ್ ಸದಸ್ಯತ್ವ ಹೆಚ್ಚಿಸಲು ಯೋಜನೆ  ಹಾಕಿಕೊಂಡಿದೆ. 2019ಕ್ಕಾಗುವಾಗ ಕೇರಳದಲ್ಲಿ ಆರೆಸ್ಸೆಸ್ ಕಾಯಕರ್ತರ ಸಂಖ್ಯೆ ಒಂಬತ್ತು ಲಕ್ಷಕ್ಕೇರಿಸುವ ಗುರಿಯನ್ನು ಅದು ಹೊಂದಿದೆ. ಲೋಕಸಭಾ ಚುನಾವಣೆಯ ಮೊದಲು ಈ ವಿಸ್ತಾರಕಾರ್ಯ ಕಾರ್ಯಗತಗೊಳಿಸುವ ಉದ್ದೇಶವನ್ನು ಅದು ಹೊಂದಿದೆ.

ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ದಾಳಿ ನಡೆಯುತ್ತಿದೆ. ಆದರೂ ಸಮಾಜದ ಪ್ರಗತಿಗಾಗಿ ಪ್ರತಿಜ್ಞಾ ಬದ್ಧವಾಗಿ ಕೆಲಸಮಾಡುವ ದೃಢನಿಶ್ಚಯದಿಂದ ಹೀಗೆ ಮಾಡಲಾಗುತ್ತಿದೆ ಎಂದು ಆರೆಸ್ಸೆಸ್ ಹಿರಿಯ ನಾಯಕ ಜೆ. ನಂದಕುಮಾರ್ ಹೇಳಿದ್ದಾರೆ. ಈ ದಾಳಿಗಳು ದೇಶದೊಂದಿಗೆ ಆರೆಸ್ಸೆಸ್ ಹೊಂದಿರುವ ಪ್ರತಿಜ್ಞಾ ಬದ್ಧತೆಯನ್ನು ಬಲಪಡಿಸುತ್ತಿದೆ ಎಂದು ಅವರು ಹೇಳಿದರು.

ಐದುಸಾವಿರ ಆರೆಸ್ಸೆಸ್ ಶಾಖೆಗಳು ಕೇರಳದಲ್ಲಿವೆ. ಎಡಪಕ್ಷಗಳು ಕೇರಳದಲ್ಲಿ ಬೇರುಗಳನ್ನು ಕಳೆದುಕೊಳ್ಳುತ್ತಿವೆ ಎಂದು ನಂದಕುಮಾರ್  ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News