ಇಂದಿನ ಸೂರ್ಯಗ್ರಹಣ ವೀಕ್ಷಣೆಗೆ ಮದ್ರಾಸ್ ಅತ್ಯುತ್ತಮ ಸ್ಥಳ,ದುರದೃಷ್ಟವೆಂದರೆ ಇದು ಭಾರತದಲ್ಲಿಲ್ಲ!

Update: 2017-08-21 10:53 GMT

ಹೊಸದಿಲ್ಲಿ,ಆ.21: ಅಮೆರಿಕದ ಜನರಿಗೆ ಇಂದು ಶತಮಾನದ ಸೂರ್ಯಗ್ರಹಣವನ್ನು ವೀಕ್ಷಿಸುವ ಸಂಭ್ರಮ. ಮಿಲಿಯಗಟ್ಟಲೆ ಜನರು ಕ್ಯಾಮೆರಾಗಳು ಮತ್ತು ಕಣ್ಣಿಗೆ ರಕ್ಷಣೆ ನೀಡುವ ಕನ್ನಡಕಗಳೊಂದಿಗೆ ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಲು ಸಜ್ಜಾಗಿ ದ್ದಾರೆ. ಮದ್ರಾಸ್‌ನ ಜನರಿಗೂ ಈ ಭಾಗ್ಯ ದೊರೆಯಲಿದೆ ಮತ್ತು ಸಂಪೂರ್ಣ ಗ್ರಹಣದ ದೃಶ್ಯ ಅತ್ಯುತ್ತಮವಾಗಿ ವೀಕ್ಷಿಸಬಹುದಾಗಿದೆ. ಅರೆ,ಅಮೆರಿಕದಲ್ಲಿ ಸಂಭವಿಸುವ ಗ್ರಹಣ ಇಲ್ಲಿ ಹೇಗೆ ಕಾಣಲು ಸಾಧ್ಯ ಎಂದು ಅಚ್ಚರಿಯೇ? ಅಂದ ಹಾಗೆ ಈ ಮದ್ರಾಸ್ ಭಾರತದಲ್ಲಿಲ್ಲ.....ಅದಿರುವುದು ಅಮೆರಿಕದ ಒರೆಗಾಂವ್‌ನಲ್ಲಿ!

ಸೈನ್ಸ್ ಚಾನೆಲ್ ಮದ್ರಾಸ್‌ನಿಂದ ಸೂರ್ಯಗ್ರಹಣದ ದೃಶ್ಯಾವಳಿಗಳನ್ನು ನೇರ ಪ್ರಸಾರ ಮಾಡಲಿದೆ. ಲೋವೆಲ್ ನಿರೀಕ್ಷಣಾಲಯದ ಬೋಧಕರು ಮತ್ತು ಖಗೋಳ ವಿಜ್ಞಾನಿಗಳು ವೀಕ್ಷಕ ವಿವರಣೆಯನ್ನು ನೀಡಲಿದ್ದಾರೆ.

ಗ್ರಹಣವನ್ನು ವೀಕ್ಷಿಸಲು ಸುಮಾರು ಎರಡು ಲಕ್ಷಕ್ಕೂ ಅಧಿಕ ಜನರು ಮದ್ರಾಸ್‌ನಲ್ಲಿ ಸಮಾವೇಶಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News