ಕಾಂಗ್ರೆಸ್‍ನ ಭಾಗ್ಯಗಳಿಂದ ದಲಿತರಿಗೆ ಉಪಯೋಗವಿಲ್ಲ: ಡಾ.ಅಂದಾನಿ

Update: 2017-08-21 11:25 GMT

ತುಮಕೂರು, ಆ.21: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಘೋಷಿಸಿರುವ ಹಲವು ಭಾಗ್ಯಗಗಳಲ್ಲಿ ಜನಸಂಖ್ಯೆ ಯಲ್ಲಿ ಮೊದಲ ಸ್ಥಾನದಲ್ಲಿರುವ ದಲಿತರಿಗೆ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಅಂದಾನಿ ಆರೋಪಿಸಿದ್ದಾರೆ.

ನಗರದ ಜೆಡಿಎಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಜನಸಂಖ್ಯೆಯಲ್ಲಿ ದಲಿತರು ಮೊದಲ ಸ್ಥಾನದಲ್ಲಿದ್ದಾರೆ. ಆದರೆ ನಾಲ್ಕು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ದಲಿತರಿಗೆ ನೀಡಿರುವ ಸೌಲಭ್ಯ ಶೂನ್ಯ, ಅದೇ ರೀತಿಯಲ್ಲಿ ಕೇಂದ್ರ ಬಿಜೆಪಿ ಸರಕಾರ ಕೂಡು ದಲಿತರ ಪರವಾಗಿ ಯಾವುದೇ ರೀತಿಯ ಅನುಕೂಲವಾದ ಯೋಜನೆಗಳನ್ನು ನೀಡುತ್ತಿಲ್ಲ ಎಂದು ದೂರಿದರು.

ಸ್ವಚ್ಛ ಭಾರತ್,ನೋಟು ನಿಷೇಧ ಹೊರತುಪಡಿಸಿದರೆ ಈ ಸರಕಾರಿಂದ ರೈತರಿಗೆ ಬಡವರಿಗೆ ಏನು ಅನುಕೂಲವಾಗಿದೆ ಎಂದು ಪ್ರಶ್ನಿಸಿದ ಅವರು,ರಾಜ್ಯದ ದಲಿತರ ಹಿತ ಕಾಯುವ ಏಕೈಕ ಪಕ್ಷ ಅದು ಜೆಡಿಎಸ್ ಮಾತ್ರ.ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ದಲಿತರ,ರೈತರ ಪರವಾಗಿ ಹೆಚ್ಚು ಯೋಜನೆ ತಂದು ಅಭಿವೃದ್ದಿಗೆ ಪೂರಕರಾಗಿದ್ದಾರೆ.ಅದೇ ರೀತಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇವಲ 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿ ದಲಿತರ ಕೇರಿಗಳಲ್ಲಿ ವಾಸ್ತವ್ಯ ಹೂಡಿ ಇಂದಿಗೂ ದಲಿತರ ಮನದಲ್ಲಿ ನೆಲೆಯೂರಿದ್ದಾರೆ ಎಂದು ನುಡಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು ದಲಿತರನ್ನು ಓಟ್‍ಬ್ಯಾಂಕ್‍ಗಳಿಗಾಗಿ ಬಳಸಿಕೊಳ್ಳುತ್ತಿದೆ ವಿನಹ ಅವರ ಅಭಿವೃದ್ದಿಗಾಗಿ ಯಾವುದೇ ಯೋಜನೆ ಕೈಗೊಳ್ಳುತ್ತಿಲ್ಲ. ದಲಿತರ ಹಿಂದುಳಿದವರ ಅಲ್ಪಸಂಖ್ಯಾಂತರ ಹಾಗೂ ಎಲ್ಲಾ ಜನರ ಸಮಸ್ಯೆಗೆ ಸ್ವಂದಿಸುವ ಏಕೈಕ ಪಕ್ಷ ಅದು ಜೆಡಿಎಸ್ ಪಕ್ಷವಾಗಿದೆ.ಜೆಡಿಎಸ್ ಶಾಸಕರು ಪಕ್ಷ ಬಿಟ್ಟಿಎಉವ ಬಗ್ಗೆ ಪ್ರತಿಕ್ರಿಸಿದ ಅವರು ಜೆಡಿಎಸ್ ಪಕ್ಷ ನಾಯಕರನ್ನು ಸೃಷ್ಟಿ ಮಾಡುವ ಪಕ್ಷ ಇಲ್ಲಿ ರಾಜಕೀಯ ಕಲಿತು ಬೇರೆ ಬೇರೆ ಪಕ್ಷಗಳಿಗೆ ಧುಮುಕಿದ್ದಾರೆ. ಅದೇ ರೀತಿ ಜಮೀರ್ ಅಹಮದ್‍ಖಾನ್ ಮತ್ತಿತರು ಪಕ್ಷ ತೊರೆದು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ ಅದು ಅವರ ವೈಯಕ್ತಿಕ ವಿಚಾರ ಎಂದು ನುಡಿದರು.

ರಾಜ್ಯದಲ್ಲಿ ದಲಿತರನ್ನು ಸಂಘಟಿಸಲು ಸೆಪ್ಟಂಬರ್ ಮೂರನೇ ವಾರದಲ್ಲಿ ಜೆಡಿಎಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಪರಿಶಿಷ್ಟ ಜಾತಿ ವರ್ಗಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 5 ಲಕ್ಷ ಪರಿಶಿಷ್ಟ ಪಂಗಡದ ಬಂಧುಗಳು ಭಾಗವಹಿಸುವರು.ಈ ಸಮಾವೇಶಕ್ಕೆ ರಾಜ್ಯದ ಎಲ್ಲಾ ಭಾಗಗಳಿಂದಲೂ ದಲಿತ ಬಂಧುಗಳು ಬಾಗವಹಿಸುವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಇರುವುದೇ ಒಂದೇ ಪಕ್ಷ ಅದು ಜೆಡಿಎಸ್ ಆದ್ಧರಿಂದ ಜನರು ಈ ಪಕ್ಷದ ಮೇಲೆ ಒಲವು ಇಟ್ಟಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್, ಜಿಲ್ಲಾ ಪರಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಾರುತಿ ಗಂಗಹನುಮಯ್ಯ, ನಗರದ ಜೆಡಿಎಸ್ ಅಧ್ಯಕ್ಷ ನರಸೇಗೌಡ,  ಮುಖಂಡರಾದ ಮಧು, ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News