ಚಿಕ್ಕಮಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರೈತ ಸಂಘದಿಂದ ಪ್ರತಿಭಟನೆ

Update: 2017-08-21 12:03 GMT


ಚಿಕ್ಕಮಗಳೂರು, ಆ.21:  ತಮ್ಮ ವಿವಿಧ ಭೇಡಿಕೆಗಳನ್ನು ಈಡೆರಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಕಾರ್ಯಕರ್ತರು ಸೋಮವಾರ ನಗರದ ಆಜಾದ್‍ಪಾಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಜ್ಯದಾದ್ಯಂತ ಕಂಪೆನಿ ಕಾರ್ಪೊರೇಟ್ ಭೂ ಮಾಫಿಯಾಗಳು ಅತಿಕ್ರಮಿಸಿರುವ 15 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಬಡವರಿಗೆ ಹಂಚಿಕೆ ಮಾಡಬೇಕು. 1973/74ರ ಭೂಮಿತಿ ಕಾಯ್ದೆಗೆ ವಂಚನೆ ಮಾಡಿ ಹೆಚ್ಚುವರಿ ಭೂಮಿಯನ್ನು ಉಳಿಸಿಕೊಂಡವರ ಕುರಿತು ಸರ್ವೆ ನಡೆಸಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕು. ರಾಜ್ಯದಲ್ಲಿರುವ ಭೂಮಿಯನ ನು ಆಡಿಟಿಂಗ್ ಮಾಡಲು ಸಂಘಟಕರನ್ನು ಒಳಗೊಂಡಿರುವ ಸಿಎಂ ನೇತೃತ್ವದಲ್ಲಿ ಹೈಪವರ್ ಕಮಿಟಿಯನ್ನು ರಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಣ್ಣ, ಮಧ್ಯಮ ಪಟ್ಟಣಕ್ಕೆ ಅನ್ಚಯಿಸಿ ಮತ್ತು ಗುಳೆ ಹೋಗುವ ಬಡವರಿಗೆ ಉಧ್ಯೋಗ ನೀಡಬೇಕು. ಜೀವನೋಪಾಯಕಕಾಗಿ ಒತ್ತುವರಿ ಮಾಡಿಉವ ಬಡವರ ಭೂಮಿಯನ್ನು ತಕ್ಷಣ ಸಕ್ರಮಗೊಳಿಸಬೇಕು ಎಂದರು.

ಚಿಕ್ಕಮಗಳೂರು ಜಿಲ್ಲೆಯ ಭೂ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಿ ಭೂ ಹೀನರಿಗೆ ಹಂಚಿಕೆ ಮಾಡಬೇಕು. ಮಲೆನಾಡು ಭೂಮಿಗೆ ಭೂ ಮಿತಿ ಕಾಯ್ದೆ ಜಾರಿಗೊಳಿಸಬೇಕು. ಯೋಜನೆಗಳ ಹೆಸರಿನಲ್ಲಿ ದಲಿತ, ರೈತ, ಆದಿವಾಸಿ, ಸಾಮಾನ್ಯ ಜನರ ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು. ಹಳೇಮೂಡಿಗೆರೆ, ಜನ್ನಾಪುರ, ದಾರದಹಳ್ಳಿ, ಕೂವೆ ಪಂಚಾಯತ್ ವ್ಯಾಪ್ತಿಗಳಲ್ಲಿ ಜಿಲ್ಲೆಯ ಎಲ್ಲಾ ಜನರಿಗೆ ನಿವೇಶನವನ್ನು ಒದಗಿಸಬನೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕಾಂ.ಹುಲ್ಲೇಮನೆ ಶಂಕರ್ಮತ್ತು ಜಿಲ್ಲಾ ಕಾರ್ಯದರ್ಶಿ ಕಾಂ.ಸಿ.ಇ.ಬಸವರಾಜ್ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News