ಸರಕಾರದ ಯೋಜನೆಗಳ ಸದ್ಬಳಕೆ ವಿದ್ಯಾರ್ಥಿಗಳು ಮುಂದಾಗಬೇಕು: ಸಾಕಮ್ಮ

Update: 2017-08-21 12:56 GMT

ಹನೂರು, ಆ.21: ಹನೂರು ಕ್ಷೇತ್ರ ವ್ಯಾಪ್ತಿಯ ತೆಳ್ಳನೂರು ಸರ್ಕಾರಿ ಹಿರಿಯ  ಪ್ರಾಥಮಿಕ ಶಾಲೆಯಲ್ಲಿ  ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಎಂಟನೆ ತರಗತಿಯ ವಿದ್ಯಾರ್ಥಿಗಳಿಗೆ ತಾಲೂಕು ಪಂಚಾಯತ್ ಸದಸ್ಯೆ ಸಾಕಮ್ಮ ಅವರು ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್‍ ವಿತರಿಸಿದರು. 

ಬಳಿಕ ಮಾತನಾಡಿದ ಅವರು,  ಸರ್ಕಾರವು ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೂರೆಯಲಿ ಎಂಬ ಸದ್ದುದೇಶದಿಂದ ಹಾಗೂ ಮಕ್ಕಳಿಗೆ ಅನುಕೂಲವಾಗಬೇಕು ಎಂಬ ಹಿತ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು,  ಅದ್ದರಲ್ಲಿ ಕ್ಷೀರಭಾಗ್ಯ ,ಬಿಸಿಯೂಟ ಯೋಜನೆ, ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಒದಗಿಸುತ್ತಿದೆ ಇದರ ಸದ್ಬಳಕೆನ್ನು ಪ್ರತಿಯೊಬ್ಬ ವಿದ್ಯಾರ್ಥಿ ಸದ್ಬಳಕೆ ಮಾಡಿಕೂಳ್ಳಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹದೇವಮ್ಮ , ಉಪಾಧ್ಯೆಕ್ಷೆ ಮಹಾಲಕ್ಷ್ಮೀ,  ಎಸ್ ಡಿಎಂಸಿ ಅಧ್ಯೆ ಕ್ಷೆ ಸಾಕಮ್ಮ , ಶಾಲೆಯ ಮುಖ್ಯ ಶಿಕ್ಷಕಿ ರಾಗಿಣಿ ಹಾಗೂ ಮತ್ತಿತರರು ಉಪಸ್ಥಿತದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News