ಎಟಿಎಂ ನಗದು ಪೂರೈಕೆ ವ್ಯಾನ್‌ನಿಂದ 57 ಲ.ರೂ.ದೋಚಿದ ಬೈಕ್ ಸವಾರರು

Update: 2017-08-21 12:21 GMT

ಜೈಪುರ,ಆ.21: ಭಿಲ್ವಾರಾ ಜಿಲ್ಲೆಯಲ್ಲಿ ಸೋಮವಾರ ಅಪರಿಚಿತ ಬೈಕ್ ಸವಾರರಿಬ್ಬರು ಎಟಿಎಂಗಳಿಗೆ ನಗದು ಪೂರೈಸುವ ಖಾಸಗಿ ವ್ಯಾನಿನಲ್ಲಿದ್ದ, 57 ಲ.ರೂ.ಗಳು ತುಂಬಿದ್ದ ಬ್ಯಾಗೊಂದನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾರೆ.

ಭಿಲ್ವಾರಾ ಸೆಷನ್ಸ್ ನ್ಯಾಯಾಲಯದ ಬಳಿ ವ್ಯಾನಿನ ಟೈರ್ ಪಂಕ್ಚರ್ ಆಗಿ ನಿಂತುಕೊಂಡಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.

ಆರೋಪಿಗಳ ಪತ್ತೆಗಾಗಿ ನಾಕಾಬಂದಿಯನ್ನು ಏರ್ಪಡಿಸಿರುವ ಪೊಲೀಸರು, ಘಟನಾ ಸ್ಥಳದ ಸಮೀಪದಲ್ಲಿಯ ಸಿಸಿಟಿವಿ ಪೂಟೇಜ್‌ಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಎಸ್‌ಪಿ ಪ್ರದೀಪ ಮೋಹನ ಶರ್ಮಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News