ಮುದ್ದೇಬಿಹಾಳ: ಹಜ್ ಯಾತ್ರಿಕರಿಗೆ ಉರ್ದು ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ

Update: 2017-08-21 18:42 GMT

ಮುದ್ದೇಬಿಹಾಳ, ಆ.21: ಮುದ್ದೇಬಿಹಾಳ ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಸೋಮವಾರ ಹಜ್ ಯಾತ್ರಿಕರಿಗೆ ಬಿಳ್ಕೋಡುಗೆ ಸಮಾರಂಭ ನಡೆಯಿತು.

ಈ ವೇಳೆ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಮುಸ್ಲಿಂ ಕೌನ್ಸಿಲ್ ಯುವ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಿಸಾಲ್ದಾರ ಮಾತನಾಡಿ, ಹಜ್ ಯಾತ್ರೆ ಮುಸ್ಲಿಂ ಧರ್ಮದ 5 ತತ್ವ ಸಿದ್ಧಾಂತಗಳಲ್ಲಿ ಒಂದಾಗಿದೆ. ಹಜ್ ಯಾತ್ರೆ ಆರ್ಥಿಕವಾಗಿ ಸದೃಢರಾಗಿದ್ದವರಿಗೆ ಕಡ್ಡಾಯವಾಗಿದೆ. ಈ ಯಾತ್ರೆ ಕೈಗೊಂಡ ಮೊಯಿದ್ದೀನ್ ಮೋಮಿನರವರು ಬಡತನದಿಂದ ಮೇಲೆ ಬಂದು ಆರ್ಥಿಕವಾಗಿ ಸದೃಢರಾಗಿದ್ದು ದೇವರು ಇವರನ್ನು ಹಜ್ ಯಾತ್ರೆಗೆ ಕರೆಸಿಕೊಳ್ಳುತ್ತಿರುವುದ ಸ್ವಾಗತಾರ್ಹ. ಆರ್ಥಿಕವಾಗಿ ಸದೃಢರಾದ ಮುಸ್ಲಿಂರು ಈ ಹಜ್‌ ಯಾತ್ರೆಗೆ ಮುಂದಾಗಬೇಕು ಎಂದರು.

ಸಂರ್ಭದಲ್ಲಿ ಮೌಲಾನಾ ಅಲ್ಲಾಭಕ್ಷ, ಎ.ಎಲ್.ಮೂಲಿಮನಿ, ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯೋಪಾದ್ಯಾಯ ಎ.ಎಸ್.ಮಕಾಶಿ ಮಾತನಾಡಿದರು. ಕರ್ನಾಟಕ ಮುಸ್ಲಿಂ ಕೌನ್ಸಿಲ್ ಜಿಲ್ಲಾ ಅಧ್ಯಕ್ಷ ಎಂ.ಆರ್.ಮುಲ್ಲಾ, ಐ.ಎಲ್.ಮಮದಾಪೂರ, ಅಮೀನ ಸಾಬ ಮುಲ್ಲಾ, ಎಸ್ಡಿಎಂಸಿ ಅಧ್ಯಕ್ಷ ಎಲ್.ಎಂ.ನಾಯ್ಕೋಡಿ. ಐ.ಆರ್.ಇನಾಮದಾರ ಉಪಸ್ಥಿತರಿದ್ದರು. ವಿದ್ಯಾರ್ಥಿ ಎ.ಎನ್.ಉಣ್ಣಿಭಾವಿ ಕುರಾನ್ ಪಠಣ ಮಾಡಿದರು. ಎ.ಎಚ್.ಇನಾಮದಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಐ.ಡಿ.ಕಲಕೇರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News